Monday, October 14, 2024
Homeರಾಜಕೀಯ | Politicsಮುನಿರತ್ನ ಹೆಸರಿದ್ದ ಸ್ಲಾಬ್‌ಗಳಿಗೆ ಸಿಮೆಂಟ್‌ ಬಳಿಯುತ್ತಿರುವ ಕಾಂಗ್ರೆಸ್ಸಿಗರು

ಮುನಿರತ್ನ ಹೆಸರಿದ್ದ ಸ್ಲಾಬ್‌ಗಳಿಗೆ ಸಿಮೆಂಟ್‌ ಬಳಿಯುತ್ತಿರುವ ಕಾಂಗ್ರೆಸ್ಸಿಗರು

Congress workers applying cement to slabs bearing Munirath's name

ಬೆಂಗಳೂರು,ಸೆ.21- ಕೊಲೆ ಬೆದರಿಕೆ, ಜಾತಿನಿಂದನೆ ಹಾಗೂ ಹನಿಟ್ರಾಪ್ ಮಾಡಿಸಿರುವ ಆರೋಪಕ್ಕೆ ಗುರಿಯಾಗಿರುವ ಶಾಸಕ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಹೀಗಾಗಿ ಅಲ್ಲಿನ ಜನ ಮುನಿರತ್ನ ಎಂಬ ಹೆಸರು ಕಂಡ ಕಂಡ ಕಡೆಗಳೆಲ್ಲ ಮಸಿ ಬಳಿಯತೊಡಗಿದ್ದಾರೆ. ಮಾತ್ರವಲ್ಲ ಚರಂಡಿ ಸ್ಲಾಬ್ಗಳ ಮೇಲೆ ಹಾಕಿಸಿದ್ದ ಮುನಿರತ್ನ ಎಂಬ ಹೆಸರಿಗೆ ಸಿಮೆಂಟ್ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಗ್ಗೆರೆ ಸುತ್ತಮುತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ಚರಂಡಿಗಳ ಸ್ಲಾಬ್ಗಳ ಮೇಲೆ ಬರೆಸಲಾಗಿದ್ದ ಮುನಿರತ್ನ ಎಂಬ ಹೆಸರಿಗೆ ಸಿಮೆಂಟ್ ಹಾಕಿ ಮರೆ ಮಾಚುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮುನಿರತ್ನ ಅವರು ಚರಂಡಿ ಕಾಮಗಾರಿ ನಡೆಯುತ್ತಿದ್ದ ಎಲ್ಲ ಸ್ಲಾಬ್ಗಳ ಮೇಲೆ ತಮ್ಮ ಹೆಸರನ್ನು ಬರೆಸಿಕೊಂಡಿದ್ದರು.ಆರ್.ಆರ್.ನಗರ ಕ್ಷೇತ್ರದ ಬಹುತೇಕ ಚರಂಡಿ ಸ್ಲಾಬ್ಗಳ ಮೇಲೆ ಮುನಿರತ್ನ ಅವರ ಹೆಸರು ರಾರಾಜಿಸುತ್ತಿದ್ದವು. ಇದೀಗ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಸ್ಲಾಬ್ಗಳಿಗೂ ಸಿಮೆಂಟ್ ಬಳಿಯುತ್ತಿದ್ದಾರೆ.

RELATED ARTICLES

Latest News