Monday, September 16, 2024
Homeರಾಷ್ಟ್ರೀಯ | Nationalಮದರಸಾದಲ್ಲಿ ಆರ್ಎಸ್ಎಸ್ ವಿರೋಧಿ ಪುಸ್ತಕ ಪತ್ತೆ

ಮದರಸಾದಲ್ಲಿ ಆರ್ಎಸ್ಎಸ್ ವಿರೋಧಿ ಪುಸ್ತಕ ಪತ್ತೆ

Controversial book on RSS found in madrasa during search in fake currency case

ಲಕ್ನೋ,ಸೆ.4– ಮದರಸಾದಲ್ಲಿ ಆರ್ಎಸ್ಎಸ್ ಕುರಿತ ವಿವಾದಾತಕ ಪುಸ್ತಕ ದೊರೆತಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ.ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಮೇರೆಗೆ ಮದರಸಾಗೆ ಶೋಧಕ್ಕೆಂದು ಹೋಗಿದ್ದ ಅಧಿಕಾರಿಗಳಿಗೆ ಈ ವಿವಾದಾತಕ ಪುಸ್ತಕ ಸಿಕ್ಕಿದೆ.

ಪ್ರಯಾಗ್ರಾಜ್ನ ಅತರ್ಸ್ಯುಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ, ಪೊಲೀಸರು ಪುಸ್ತಕವನ್ನು ವಶಪಡಿಸಿಕೊಂಡಿದ್ದಾರೆ.

ಆರ್ಎಸ್ಎಸ್ ದಿ ಬಿಗ್ಗೆಸ್ಟ್ ಟೆರರಿಸ್ಟ್ ಆರ್ಗನೈಸೇಷನ್ ಇನ್ ದಿ ಕಂಟ್ರಿ ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್.ಎಂ ಮುಷರಫ್ ಎಂಬುವವರು ಬರೆದಿದ್ದಾರೆ.

ಮದರಸಾದಲ್ಲಿ ಆರ್ಎಸ್ಎಸ್ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮದ್ ತಫ್ಸೀರುಲ್ ಅರಿಫೀನ್ ಈ ಪುಸ್ತಕವನ್ನು ಬಳಕೆ ಮಾಡುತ್ತಿರಬಹುದು ಎಂದು ಅನುಮಾನಿಸಲಾಗಿದೆ.

RELATED ARTICLES

Latest News