Thursday, March 13, 2025
Homeರಾಜ್ಯCouncil Session Highlights : ಇಂದಿನ ವಿಧಾನಪರಿಷತ್ ಕಲಾಪದ ಹೈಲೈಟ್ಸ್ (13-03-2025)

Council Session Highlights : ಇಂದಿನ ವಿಧಾನಪರಿಷತ್ ಕಲಾಪದ ಹೈಲೈಟ್ಸ್ (13-03-2025)

Council Session Highlights - 13-03-2025

* ಜೈಲಿನೊಳಗಿನ ಅಪರಾಧ ಹಾಗೂ ಅಕ್ರಮಗಳ ತಡೆಗೆ ಆಧುನಿಕ ತಂತ್ರಜ್ಞಾನ ಬಳಕೆ : ಪರಮೇಶ್ವರ್‌
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜೈಲಿನೊಳಗಿನ ಅಪರಾಧ ಹಾಗೂ ಅಕ್ರಮಗಳ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ವಿಧಾನಪರಿಷತ್‌ನಲ್ಲಿ ಹೇಳಿದರು. Read Full


*ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಗೃಹ ಸಚಿವಪರಮೇಶ್ವರ್‌ ಎಚ್ಚರಿಕೆ
ದಿನದಿಂದ ದಿನಕ್ಕೆ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ನ್ಯೂಸ್‌‍ (ಸುಳ್ಳು ಸುದ್ದಿ) ಹಬ್ಬಿಸುವವರ ಕಟ್ಟು ನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ. Read Full


*ಓಪಿಎಸ್‌‍ ಜಾರಿಗೆ ಸರ್ಕಾರ ಬದ್ಧ : ಗೃಹಸಚಿವರ ಭರವಸೆ
ಬೆಂಗಳೂರು,ಮಾ.13- ನಾವು ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ವಾಗ್ದಾನದಂತೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಮಾಡಲು ಬದ್ದರಾಗಿದ್ದೇವೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಗೃಹ ಸಚಿವ ಡಾ. ಪರಮೇಶ್ವರ್‌ ಅವರು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌‍ ಸದಸ್ಯ ರಾಮೋಜಿಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಭಾ ನಾಯಕ ಹಾಗೂ ಸಚಿವ ಭೋಸರಾಜ್‌ ಅವರು ಉತ್ತರ ನೀಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪರಮೇಶ್ವರ್‌ ಅವರು, ನಾನು ಪ್ರಣಾಳಿಕಾ ಸಮಿತಿ ಅಧ್ಯಕ್ಷನಾಗಿದ್ದೆ. ನಾವು ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯನ್ನು ನಾವು ಈಡೇರಿಸುತ್ತೇವೆ. ಇಂದಾದರೂ ಆಗಬಹುದು ನಾಳೆ ಆಗಬಹುದು. ಈಗ ಕೇಂದ್ರ ಸರಕಾರಕ್ಕೂ ಮನವರಿಕೆಯಾಗಿದೆ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.

ಎನ್‌ಪಿಎಸ್‌‍ ಹಾಗೂ ಒಪಿಎಸ್‌‍ ನಡುವೆ ಸಾಕಷ್ಟು ಗೊಂದಲ ಇದೆ. ಏನು ಇದ್ದರೂ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ಅನುಷ್ಠಾನದ ವಿಷಯದಲ್ಲಿ ಸ್ವಲ್ಪ ವಿಳಂಬವಾಗಬಹುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಭಾನಾಯಕ ಬೋಸರಾಜ್‌ ಉತ್ತರಿಸಿ, ನಮ ಸರ್ಕಾರ ಬಂದ ಮೇಲೆ ಇದರ ಬಗ್ಗೆ ಸಭೆ ನಡೆಸಲಾಗಿದೆ. ಆದಷ್ಟು ಬೇಗ ನಾವು ಇದನ್ನು ಬಗೆಹರಿಸುತ್ತೇವೆ ಎಂದರು.

ಸಭೆಗಳು ಕೂಡ ಮುಂದುವರೆದಿವೆ. ನಾವು ಭರವಸೆ ಕೊಟ್ಟಿದ್ದೇವೆ, ಬಗೆಹರಿಸುತ್ತೇವೆ. ಆದರೆ ಇಂತಿಷ್ಟೇ ಸಮಯದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಆಶ್ವಾಸನೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗ ಸಭಾಪತಿ ಬಸವರಾಜ್‌ ಹೊರಟ್ಟಿ ಅವರು ಮಧ್ಯಪ್ರವೇಶ ಮಾಡಿ, ಒಪಿಎಸ್‌‍ ಕೊಡ್ತೀರೋ ಇಲ್ಲವೋ ಹೇಳಿ ಬಿಡಿ. ಅನೇಕರಿಗೆ ಒಂದೊಂದು ರೂಪಾಯಿಗೂ ಸಮಸ್ಯೆ ಆಗಿದೆ. ಬೇರೆ ರಾಜ್ಯದಲ್ಲಿ ಆಗಿದೆ. ನೀವು ಯಾವಾಗ ಅನುಷ್ಟಾನ ಮಾಡುತ್ತೀರಿ ಹೇಳಿ. ಕೊಟ್ಟ ಮಾತಿನಂತೆ ನಡೆಯಿರಿ ಅಷ್ಟೇ ಎಂದು ಸರ್ಕಾರಕ್ಕೆ ಸೂಚಿಸಿದರು. ಈ ವೇಳೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ನೀಡುತ್ತಿರುವುದು ಹಾರಿಕೆ ಉತ್ತರ. ಸಮಯ ನಿಗದಿಪಡಿಸಲು ಆಗುವುದಿಲ್ಲ ಅಂದರೆ ಹೇಗೆ? ಸರಿಯಾದ ಉತ್ತರ ಇಲ್ಲ. ಸದಸ್ಯರು ಪ್ರಶ್ನೆಯೇ ಕೇಳಬಾರದಾ ಎಂದು ಪ್ರಶ್ನೆ ಮಾಡಿದರು.

ಸರ್ಕಾರಕ್ಕೆ ಗಂಭೀರತೆ ಇಲ್ಲ ಎನ್ನುವುದು ಇದರಿಂದಲೇ ಎನ್ನುವುದು ಅರ್ಥ ಆಗ್ತಾ ಇದೆ. ಇಷ್ಟು ದಿನದೊಳಗೆ ಎಂದು ಹೇಳಿದರೆ, ಅದು ಗಂಭೀರತೆ. ನೀವೇ ಕೊಟ್ಟ ಭರವಸೆ ಇದು. ಈಡೇರಿಸಿ ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಸದಸ್ಯ ರಾಮೋಜಿಗೌಡ ಮಾತನಾಡಿ, ಹೊಸ ಪಿಂಚಣಿಗೆ ಒಳಪಟ್ಟ ಎಷ್ಟು ನೌಕರರು ನಿವೃತ್ತಿ ಆಗಿದ್ದಾರೆ?, ಅವರು ಕನಿಷ್ಠ ಹಾಗೂ ಗರಿಷ್ಠ ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸರಿಯಾದ ಭದ್ರತೆ ಇಲ್ಲ ಅಂದರೆ ಹೇಗೆ?, ಪ್ರಣಾಳಿಕೆಯಲ್ಲೇ ಇದನ್ನು ಸೇರಿಸಲಾಗಿತ್ತು. ಸರ್ಕಾರ ಬಂದ ಮೇಲೆ ಒಪಿಎಸ್‌‍ ಜಾರಿ ಮಾಡುವುದಾಗಿ ಭರವಸೆ ನೀಡಲಾಗಿದೆ. ಎರಡು ವರ್ಷ ಆದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಅರ್ಧ ಗಂಟೆೆ ಅವಕಾಶ ಕೊಡಿ ಎಂದು ಆಡಳತ ಪಕ್ಷದ ಸದಸ್ಯ ರಾಮೋಜಿಗೌಡ ಅವರ ಮನವಿಗೆ ಸ್ಪಂದಿಸಿದ ಸಭಾಪತಿ ಹೊರಟ್ಟಿ ಅವರು ಆಯ್ತು ಬರೆದು ಕೊಡಿ ಎಂದು ಸೂಚಿಸಿದರು.

RELATED ARTICLES

Latest News