Sunday, December 1, 2024
Homeಬೆಂಗಳೂರುನಾಗಸಂದ್ರ-ಮಾದಾವರ ಮೆಟ್ರೋ ಸಂಚಾರಕ್ಕೆ ಕ್ಷಣಗಣನೆ

ನಾಗಸಂದ್ರ-ಮಾದಾವರ ಮೆಟ್ರೋ ಸಂಚಾರಕ್ಕೆ ಕ್ಷಣಗಣನೆ

Countdown for Nagasandra - Madavara metro service

ಬೆಂಗಳೂರು, ಅ.15- ಬಹು ನಿರೀಕ್ಷಿತ ನಾಗಸಂದ್ರದಿಂದ ಮಾದಾವರವರೆಗಿನ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಕ್ಷಣಗಣನೆ ಶುರುವಾಗಿದೆ. ನಮ್ಮ ಮೆಟ್ರೋದ ಹಸಿರು ಮಾರ್ಗದ ವಿಸ್ತರಣೆಯು ಮುಂದಿನ ಕೆಲವು ದಿನಗಳಲ್ಲಿ ಆರಂಭವಾಗುವ ಸಾಧ್ಯತೆಯಿದ್ದು, ಈಗಾಗಲೆ ಬಿಎಂಆರ್‌ಸಿಎಲ್ 3.14 ಕಿ.ಮೀ ಉದ್ದದ ಮಾರ್ಗವನ್ನು ಉದ್ಘಾಟಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ದಿನಾಂಕ ನಿಗದಿಗೆ ಮನವಿ ಮಾಡಿದೆ.

ಮೂಲಗಳ ಪ್ರಕಾರ, ತುಮಕೂರು ರಸ್ತೆಯ ಹಸಿರು ಮಾರ್ಗದಲ್ಲಿ ಮುಂದುವರೆದ ಮೆಟ್ರೋ ರೈಲು ಸಂಚಾರ ಆರಂಭಕ್ಕೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಒಪ್ಪಿಗೆ ಕೊಟ್ಟಿದ್ದಾರೆ. ಹಾಗಾಗಿ ಇದೇ ತಿಂಗಳು ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಸೇರಿ ಮೂರು ನಿಲ್ದಾಣಗಳನ್ನುಮಧ್ಯ ರೈಲು ಸಂಚರಿಸುವ ಚಿಂತನೆ ಇದೆ.

ಸುಮಾರು 298.65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಲಿವೇಟೆಡ್ ಮೆಟ್ರೊ ಮಾರ್ಗವು ಉದ್ಘಾಟನೆಯ ನಂತರ ಬೆಂಗಳೂರು ಮೆಟ್ರೋ ಜಾಲವು 76.95 ಕಿಮೀಗೆ ವಿಸ್ತರಿಸುತ್ತದೆ ಮತ್ತು ತುಮಕೂರು ರಸ್ತೆಯಲ್ಲಿನ ತೀವ್ರ ಸಂಚಾರ ದಟ್ಟಣೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
ರೈಲ್ವೆ ಸುರಕ್ಷತಾ ಆಯುಕ್ತರು ಅಕ್ಟೋಬರ್ 4ರಂದು ಪರಿಶೀಲನೆ ನಡೆಸಿ, ಸಂಚಾರಕ್ಕೆ ಅನುಮತಿ ನೀಡಿದ್ದರೂ ಔಪಚಾರಿಕ ಉದ್ಘಾಟನೆಯು ಸರ್ಕಾರದ ಅನುಮತಿಯ ಕೊರತೆಯಿಂದಾಗಿ ವಿಳಂಬವಾಗಿದೆ.ನಮ್ಮ ಮೆಟ್ರೋ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಉದ್ಯಮವಾಗಿರುವುದರಿಂದ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಸದ್ಯ ಕರ್ನಾಟಕದ ನಗರಾಭಿವೃದ್ಧಿ ಇಲಾಖೆ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆಯನ್ನು ಪಡೆಯಬೇಕಾಗಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ್ ರಾವ್ ಅವರು ಕಳೆದ ವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸುವಂತೆ ಪತ್ರ ಬರೆಯಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು. ನಾಗಸಂದ್ರದಿಂದ ಮಾದಾವರ ಮಾರ್ಗ ತೆರೆಯಲು ಸಿದ್ಧವಾಗಿದೆ. ಉದ್ಘಾಟನಾ ದಿನಾಂಕವನ್ನು ಡಿಸಿಎಂಒ ಮತ್ತು ಸಚಿವಾಲಯದೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು ಎಂದರು.

ಭೂಸ್ವಾಧಿನ ಸವಾಲುಗಳು ಮತ್ತು ಗುತ್ತಿಗೆದಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದಾಗಿ ನಮ್ಮ ಮೆಟ್ರೊ ಇತಿಹಾಸದಲ್ಲಿಯೇ ಅತ್ಯಂತ ನಿಧಾನಗತಿಯಲ್ಲಿ ನಿರ್ಮಾಣವಾಗಿದೆ.

RELATED ARTICLES

Latest News