Monday, May 5, 2025
Homeರಾಷ್ಟ್ರೀಯ | Nationalಉತ್ತರ ಪ್ರದೇಶ : ಕಟ್ಟಡಕ್ಕೆ ಬೆಂಕಿ ಬಿದ್ದು ದಂಪತಿ ಮತ್ತು ಮೂರು ಮಕ್ಕಳು ಸಾವು

ಉತ್ತರ ಪ್ರದೇಶ : ಕಟ್ಟಡಕ್ಕೆ ಬೆಂಕಿ ಬಿದ್ದು ದಂಪತಿ ಮತ್ತು ಮೂರು ಮಕ್ಕಳು ಸಾವು

Couple killed, 3 children feared dead in Kanpur building fire

ಕಾನ್ಸುರ, ಮೇ 5 – ಉತ್ತರ ಪ್ರದೇಶದ ಕಾನ್ಪುರದ ಚಾಮನ್‌ಗಂಜ್ ಪ್ರದೇಶದ ಪ್ರೇಮ್‌ನಗರದ ಐದು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ದಂಪತಿ ಮೂವರು ಮಕ್ಕಳು ಸಾವನ್ನಪ್ಪಿರುವ ಭೀಕರ ಘಟನೆ ಕಳೆದ ರಾತ್ರಿ ನಡೆದಿದೆ.

ಇಡೀ ಕಟ್ಟಡವನ್ನು ಬೃಹತ್ ಬೆಂಕಿ ಆವರಿಸಿದೆ. ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಕುಟುಂಬದ ಎಲ್ಲರೂ ಬೆಂಕಿಗೆ ಸಿಲುಕಿದ್ದಾರೆ ಆದರಲ್ಲಿ ಮೊಹಮ್ಮದ್ ಡ್ಯಾನಿಶ್ (45)ಮತ್ತು ಪತ್ನಿ ನಜೀನ್ ಸಬಾ (42) ಸ್ಥಳದಲೇ ಸಾವನ್ನಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣುಮಕ್ಕಳಾದ ಸಾರಾ (15), ಸಿಮ್ರಾ (12) ಮತ್ತು ಇನಾಯಾ (7) ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಮತ್ತು ಎರಡನೇ ಮಹಡಿಯಲ್ಲಿ ಶೂ ತಯಾರಿಕಾ ಕಾರ್ಖಾನೆ ಇದೆ, ನಾಲ್ಕನೇ ಮಹಡಿಗೆ ತಲುಪಲು ಅಗ್ನಿಶಾಮಕ ದಳದವರು ಹರಸಾಹಸ ಪಡಬೇಕಾಯಿತು ಎಂದು ಅವರು ಹೇಳಿದರು.
ರಾತ್ರಿ ಕಟ್ಟಡದಿಂದ ಬೆಂಕಿ ಮತ್ತು ದಟ್ಟ ಹೊಗೆ ಹೊರಹೊಮ್ಮುವುದನ್ನು ನೆರೆಹೊರೆಯವರು ಗಮನಿಸಿ ಅಗ್ನಿಶಾಮಕ ಠಾಣೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.ಮುಂಜಾನೆವರೆಗೂ ಪ್ರಯಾಸಪಟ್ಟು ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ.ಕಟ್ಟಡ ಸಂಪೂರ್ಣ ಹಾನಿಯಾಗಿದೆ.

ಬೆಂಕಿಗೆ ಕಾರಣವನ್ನು ನಿರ್ಧರಿಸಲು ತನಿಖೆ ಆರಂಭಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತಮಂಜಯ್ ಸಿಂಗ್ ಹೇಳಿದ್ದಾರೆ.ಶಾರ್ಟ್ ಸರ್ಕ್‌ಯೂಟ್ ಅಥವಾ ಆಂತರಿಕ ವೈರಿಂಗ್‌ನಲ್ಲಿನ ದೋಷ ಇರಬಹುದೆಂದು ಶಂಕಿಸಲಾಗಿದೆ. ಶೂ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದ ಮಹಡಿಯಲ್ಲಿ ಮೊದಲು ಬೆಂಕಿ ಹೊತ್ತಿರಬಹುದು ಎಂದು ಎಸಿಪಿ ಹೇಳಿದರು. ಅಕ್ಕ ಪಕ್ಕದ ಕಟ್ಟಡಗಳ ಜನರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

RELATED ARTICLES

Latest News