Sunday, November 24, 2024
Homeರಾಷ್ಟ್ರೀಯ | Nationalಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಚಿನ್ಮಯಾನಂದ್ ಖುಲಾಸೆ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಚಿನ್ಮಯಾನಂದ್ ಖುಲಾಸೆ

ಅಲಹಾಬಾದ್,ಫೆ.2-ಕಳೆದ 2011ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಚಿನ್ಮಯಾನಂದ್ ಅವರನ್ನು ಉತ್ತರ ಪ್ರದೇಶ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪ ಮಾಡಿದ್ದ ಮಹಿಳೆ ದ್ವೇಷದಿಂದ ಚಿನ್ಮಯಾನಂದ ವಿರುದ್ಧ ಸುಳ್ಳು ದೂರು ನೀಡಿ ಸುಳ್ಳು ಸಾಕ್ಷ್ಯ ನೀಡಿದ ಕಾರಣ ಆಕೆಯ ಮೇಲೆ ಪ್ರಕರಣ ದಾಖಲಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಮಾಜಿ ಕೇಂದ್ರ ಸಚಿವರು ಆಶ್ರಮದಲ್ಲಿದ್ದಾಗ ಮಹಿಳೆಯೊಬ್ಬರು ತನಗೆ ಮದ್ಯ ಕುಡಿಸಿ ಅತ್ಯಾಚಾರವೆಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು ತನ್ನ ಮೇಲೆ ಅತ್ಯಾಚಾರ ಮಾಡುವಾಗ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ರೆಕಾರ್ಡ್ ಮಾಡಿದ್ದಾರೆ, ತಾನು ಎರಡು ಬಾರಿಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದು ಭಾರಿ ಸುದ್ದಿಯಾಗಿತ್ತು ಘಟನೆ ಸಂಭಂದ ಬಂಧನಕ್ಕೆ ಒಳಗಗಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಚಿನ್ಮಯಾನಂದ ಅವರನ್ನು ಇಂದು ಖುಲಾಸೆಗೊಳಿಸಲಾಗಿದೆ.

BREAKING : ನಟಿ ಪೂನಂ ಪಾಂಡೆ ಇನ್ನಿಲ್ಲ..!

2018 ರಲ್ಲಿ, ಯುಪಿ ಸರ್ಕಾರವು ಪ್ರಕರಣವನ್ನು ಹಿಂತೆಗೆದುಕೊಂಡಿತು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಡೆಯಿಂದ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿತು. ಆದರೆ, ಜಿಲ್ಲಾ ನ್ಯಾಯಾಲಯ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು, ನಂತರ ಅದನ್ನು ಹೈಕೋರ್ಟ್ ಎತ್ತಿಹಿಡಿಯಿತು.ನಂತರ, ಚಿನ್ಮಯಾನಂದ ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದರು ಆದರೆ ಯಾವುದೇ ಪರಿಹಾರವನ್ನು ಪಡೆಯುವಲ್ಲಿ ವಿಫಲರಾದರು.

ಕಳೆದ 2022 ರಲ್ಲಿ, ಚಿನ್ಮಯಾನಂದ ಅವರು ಅಲಹಾಬಾದ್ ಹೈಕೋರ್ಟ್‍ನಿಂದ ಫೆಬ್ರವರಿ 6, 2023 ರವರೆಗೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದರು. ಮಹಿಳೆ ಮತ್ತು ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ ಜಾಮೀನನ್ನು ಮತ್ತಷ್ಟು ವಿಸ್ತರಿಸಲಾಗಿತ್ತು.

RELATED ARTICLES

Latest News