Wednesday, February 28, 2024
HomeಮನರಂಜನೆBREAKING : ನಟಿ ಪೂನಂ ಪಾಂಡೆ ಇನ್ನಿಲ್ಲ..!

BREAKING : ನಟಿ ಪೂನಂ ಪಾಂಡೆ ಇನ್ನಿಲ್ಲ..!

ಮುಂಬೈ, ಫೆ.2- ಗಾಸಿಪ್‍ಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಆಗಿದ್ದ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ (32) ಅವರು ಗಂಟಲು ಕ್ಯಾನ್ಸರ್‍ನಿಂದಾಗಿ ವಿಧಿವಶರಾಗಿದ್ದಾರೆ.

ಬಾಲಿವುಡ್‍ನ ನಶಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಪೂನಂ ಪಾಂಡೆ, ಕನ್ನಡದ ಲವ್ ಇಸ್ ಪಾಯ್ಸನ್, ತೆಲುಗಿನ ಮಾಲಿನಿ ಆಂಡ್ ಕೋ, ಬೋಜ್‍ಪುರಿಯ ಒಂದು ಸಿನಿಮಾ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ್ದು, ಇವರ ನಿಧನದಿಂದ ಬಾಲಿವುಡ್ ಲೋಕದಲ್ಲಿ ದುಃಖಮಡುಗಟ್ಟಿದೆ.

ಪೂನಂಪಾಂಡೆ ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ಅವರು ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.ಇಂದು ನಮಗೆ ನಿಜಕ್ಕೂ ದುಃಖದ ದಿನವಾಗಿದೆ. ಪೂನಂಪಾಂಡೆ ಅವರು ಗಂಟಲು ಕ್ಯಾನ್ಸರ್‍ನಿಂದ ನಿಧನರಾಗಿದ್ದಾರೆಂದು ನಿಮಗೆ ತಿಳಿಸಲು ನಿಜಕ್ಕೂ ದುಃಖವಾಗುತ್ತಿದೆ. ಚಿತ್ರರಂಗದಲ್ಲಿ ಹಲವರಿಗೆ ಪ್ರೀತಿ ಪಾತ್ರರಾಗಿದ್ದ ಅವರ ನಿಧನ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಜ್ಞಾನವಾಪಿ ಮಸೀದಿ ತೀರ್ಪಿಗೆ ಹಿಂದೂ ಅಮೆರಿಕನ್ ಗುಂಪು ಸ್ವಾಗತ

ಪೂನಂ ಪಾಂಡೆ ಅವರು ಕೆಲವು ತಿಂಗಳಿನಿಂದ ಕೊನೆಯ ಹಂತದ ಗಂಟಲಿನ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇಂದು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರು ತಮ್ಮ ಕೊನೆಯ ದಿನಗಳಲ್ಲಿ ತವರೂರಾದ ಉತ್ತರಪ್ರದೇಶದಲ್ಲಿ ನೆಲೆಸಿದ್ದು ಆಕೆಯ ಅಂತಿಮ ವಿವಿಧಾನಗಳು ಅಲ್ಲೇ ನೆರವೇರಲಿದೆ ಎಂದು ಪಾರುಲ್ ಚಾವ್ಲಾ ತಿಳಿಸಿದ್ದಾರೆ.

RELATED ARTICLES

Latest News