Thursday, September 19, 2024
Homeರಾಷ್ಟ್ರೀಯ | Nationalಪತ್ನಿ ಮತ್ತು ಮೂವರು ಅಪ್ರಾಪ್ತ ಮಕ್ಕಳನ್ನು ಕೊಂದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ

ಪತ್ನಿ ಮತ್ತು ಮೂವರು ಅಪ್ರಾಪ್ತ ಮಕ್ಕಳನ್ನು ಕೊಂದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ

ಬಿಲಾಸ್ಪುರ, ಆ.14 -ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ಶೀಲ ಶಂಕೆ ವ್ಯಕ್ತಪಡಿಸಿ ಪತ್ನಿ ಮತ್ತು ಮೂವರು ಮಕ್ಕಳನ್ನು ತೀವ್ರ ಕ್ರೂರವಾಗಿ ಕೊಂದಅಪರಾಧಿಗೆ ಸ್ಥಳೀಯ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಹತ್ತನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ್ ಕೆ ತ್ರಿಪಾಠಿ ಈ ತೀರ್ಪಿ ನೀಡಿದ್ದಾರೆ. ಈ ವರ್ಷದ ಜನವರಿಯಲ್ಲಿ ದಾಖಲಾದ ಪ್ರಕರಣವೊಂದಲ್ಲಿ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಆರೋಪಿ ಉಮೆಂದ್ ಕೇವತ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಅಪರಾಧಿ ಸಾಯುವವರೆಗೂ ಅವನ ಕುತ್ತಿಗೆಗೆ ಹಗ್ಗದಿಂದ ನೇಣು ಹಾಕಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.ಇದಲ್ಲದೆ 10,000 ರೂಪಾಯಿ ದಂಡವನ್ನೂ ವಿಧಿಸಿದೆ.

ವಿಚಾರಣೆ ಮುಗಿದ ನಂತರ, ನ್ಯಾಯಾಲಯವು ಜುಲೈ 29 ರಂದು ಆದೇಶವನ್ನು ಕಾಯ್ದಿರಿಸಿತು ಮತ್ತು ಅದನ್ನು ಈಗ ಪ್ರಕಟಿಸಲಾಗಿದೆ. ಕಳೆದ ಜನವರಿ 1 ರಂದು, ಬಿಲಾಸ್ಪುರ ಜಿಲ್ಲೆಯ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ರಿ ಗ್ರಾಮದ ಮನೆಯಲ್ಲಿ ಪತ್ನಿ ಸುಕೃತಾ (32), ಇಬ್ಬರು ಪುತ್ರಿಯರಾದ ಖುಷಿ (5), ಲೀಸಾ (3) ಮತ್ತು ಮಗ ಪವನ್ (18 ತಿಂಗಳು)ಮಗುವನ್ನು ಕತ್ತು ಹಿಸುಕಿ ಕೊಂದಿದ್ದ ಉಮೆಂದ್ ಕೇವತ್ ಪರಾರಿಯಾಗಿದ್ದ.ಪೊಲೀಸರು ಈತನನ್ನು ಬಂಧಿಸಿ ದೊಷಾರೋಪಣ ಪಟ್ಟಿಯನ್ನು ನ್ಯಾಯಾಲಕ್ಕೆ ಸಲ್ಲಿಸಿದ್ದರು.

RELATED ARTICLES

Latest News