ಚಿಕ್ಕಬಳ್ಳಾಪುರ, ಜು 9– ಪ್ರೀತಿಸಲು ನಿರಾಕರಿಸಿದ ಯುವತಿಗೆ ಆ್ಯಸಿಡ್ ಎರಚಿ ತಾನೂ ಕೂಡ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪಾಗಲ್ ಪ್ರೇಮಿ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ನಡೆದಿದೆ. ಆನಂದ್ ಮೃತಪಟ್ಟ ಯುವಕ.
ಘಟನೆ ವಿವರ :
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಆನಂದ್ ಚಿಂತಾಮಣಿಯ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಅಕ್ಕನ ಮಗಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಪದೇಪದೇ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ.ಆತನ ಕಾಟಕ್ಕೆ ಬೇಸತ್ತ ಯುವತಿ ಪೋಷಕರು ತಮ್ಮ ಸಂಬಂಧಿಕರಾದ ಮಂಚನಬೆಲೆ ಗ್ರಾಮದಲ್ಲಿ ಮಗಳನ್ನು ಬಿಟ್ಟಿದ್ದರು. ಅಲ್ಲಿಯೇ ಇದ್ದು ವಿದ್ಯಾಭ್ಯಾಸ ಮುಂದುವರೆಸಿದ್ದಳು.
ಅಲ್ಲಿಗೂ ಹೋದ ಆನಂದ್ ಯುವತಿಯನ್ನು ತನ್ನೊಡನೆ ಕಳುಹಿಸುವಂತೆ ಬೆಂಬಿಡದೆ ಕಾಡಿದ್ದಾನೆ. ಅದಕ್ಕೆ ಪೋಷಕರು ನಿರಾಕರಿಸಿದಾಗ ಆಕೆಯನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾನೆ. ಆಗ ಯುವತಿ ಬಾರದಿದ್ದಾಗ ಸಿಟ್ಟಿಗೆದ್ದು ಬಾತರೂಂ ತೊಳೆಯುವ ಆ್ಯಸಿಡ್ ಅನ್ನು ಆಕೆಯ ಮೈಮೇಲೆ ಎರಚಿ, ನಂತರ ಆತನೂ ಕೂಡ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಹೈಡ್ರಾಮವಾಡಿದ್ದಾನೆ.
ಸಣ್ಣ ಪುಟ್ಟ ಗಾಯಗಳಾಗಿದ್ದ ಆಕೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾಳೆ. ಆದರೆ ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆನಂದ್ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬೆಂಗಳೂರಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದ 12 ಸಾವಿರ ವಾಹನ ಸವಾರರ ವಿರುದ್ಧ ಎಫ್ಐಆರ್
- ಶೇ.50 ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಸವಾರರು
- ಶಾಂತಿಯುತ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಗೆ ಸೂಕ್ತ ಭದ್ರತೆ : ಆಯುಕ್ತರು
- ಸೆ.1ರಿಂದ ಬಿಜೆಪಿ ‘ಧರ್ಮಸ್ಥಳ ಚಲೋ’
- ಯೂಟ್ಯೂಬರ್ ಸಮೀರ್ ಲ್ಯಾಪ್ಟಾಪ್, ಮೊಬೈಲ್ ಜಪ್ತಿ ಸಾಧ್ಯತೆ