ಬೆಂಗಳೂರು,ಮೇ 30- ನಟ, ನಿರ್ದೇಶಕ, ನಿರ್ಮಾಪಕ, ರಾಗ ಸಂಯೋಜಕ, ಗೀತ ರಚನೆಕಾರ, ಸಂಕಲನಕಾರ ಹೀಗೆ ಹಲವಾರು ಮಜಲುಗಳಲ್ಲಿ ತನ್ನ ಛಾಪನ್ನು ಮೂಡಿಸಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ತಂದೆ ಎನ್.ವೀರಾಸ್ವಾಮಿ ಅವರು ಕಟ್ಟಿ ಬೆಳೆಸಿದ ಶ್ರೀ ಈಶ್ವರಿ ಪ್ರೋಡಕ್ಷನ್ಸ್ ಮುನ್ನಡೆಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡಿದ್ದು ಅಭಿಮಾನಿಗಳು ನಾಡಿನೆಲ್ಲಡೆ ಸಂಭ್ರಮಿಸಿದ್ದಾರೆ.
1961 ಮೇ 30 ರಂದು ಜನಿಸಿದ ರವಿಚಂದ್ರನ್ 1983ರಲ್ಲಿ ತೆರೆ ಕಂಡ ಚಕ್ರವ್ಯೂಹ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ವೀರಾಸ್ವಾಮಿ ಅವರು ಈಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಚಕ್ರವ್ಯೂಹ ಚಿತ್ರದ ರೀಟಾ ರೋಜೀ ಜೂಲಿ ಮೇರಿ ಹಾಡಿನಲ್ಲಿ ರವಿಚಂದ್ರನ್ ಅವರ ನೃತ್ಯ ಚಿತ್ರ ರಸಿಕರ ಗಮನ ಸೆಳೆಯಿತು. ಚಿತ್ರ ಸೂಪರ್ ಹಿಟ್ ಆಯಿತು.
BIG NEWS: ಯಾವುದೇ ಷರತ್ ಇಲ್ಲ, ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ
ನಂತರ ಬಂದ ಪ್ರೇಮ ಲೋಕ ಯುವಜನರ ಮನಸ್ಸು ಗೆದ್ದು ಅದರಲ್ಲಿನ ಹಾಡುಗಳು ಈಗಲೂ ಹಚ್ಚ ಹಸಿರಾಗಿವೆ. ಹಲವಾರು ಸದಭಿರುಚಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಸ್ಥಾನ ಪಡೆದ ರವಿಚಂದ್ರನ್ ಹೊಸ ಪ್ರಯೋಗದ ಮೂಲಕ ದೇಶ-ವಿದೇಶಗಳ ಚಿತ್ರರಂಗವನ್ನು ತಮ್ಮತ್ತ ಸೆಳೆದಿದ್ದಾರೆ.
CrazyStar, #Ravichandran, #birthday,