ನವದೆಹಲಿ,ಅ.14- ಮಹತ್ವದ ಬೆಳವಣಿಗೆಯಲ್ಲಿ ಮುಂದಿನ 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿರುವ ಒಲಿಂಪಿಕ್ಸ್‍ನಲ್ಲಿ ಕ್ರಿಕೆಟ್ ಸೇರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಸಿರು ನಿಶಾನೆ ತೋರಿದೆ. ಈ ಹಿಂದೆ 1900 ಇಸವಿಯಲ್ಲಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಒಂದು ಭಾಗವಾಗಿತ್ತು ನಂತರ ನಿಲ್ಲಿಸಲಾಗಿತ್ತು ಈಗ 128 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಡಿಸಲಾಗುತ್ತದೆ.
ಇನ್ನು 5 ವರ್ಷ ಬಾಕಿ ಇದ್ದು ಟಿ-20 ಕ್ರಿಕೆಟ್‍ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಜೊತೆಗೆ ಸ್ಕ್ವಾಷ್,ಬೇಸ್‍ಬಾಲ್ ,ಸಾಫ್ಟ್‍ಬಾಲ್, ಫ್ಲ್ಯಾಗ್ ಫುಟ್‍ಬಾಲ್, ಲ್ಯಾಕ್ರೋಸ್,ಸೇರಿದಂತೆ ಒಟ್ಟು ಐದು ಆಟಗಳನ್ನು ಪರಿಚಯಿಸುವ ಕುರಿತು ಲಾಸ್ ಏಂಜಲೀಸ್ ಸಂಘಟನಾ ಸಮಿತಿಯ ಪ್ರಸ್ತಾವನೆಯನ್ನು ಐಒಸಿ ಕಾರ್ಯಕಾರಿ ಮಂಡಳಿಯು ಮುಂದೆ ತಂದಿತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರು ಅಂಗೀಕರಿಸಿದ್ದಾರೆ.
ಬಾಕಿ ಬಿಲ್ ಕುರಿತು ಸಿಎಂ ಜೊತೆ ಗುತ್ತಿಗೆದಾರರ ಸಮಾಲೋಚನೆ
ಇತ್ತೀಚೆಗೆ ಮೊದಲ ಬಾರಿಗೆ ಚೀನಾದ ಹ್ಯಾಂಗ್‍ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡ ಗೆದ್ದು ಚಿನ್ನದ ಪದಕವನ್ನು ಗೆದ್ದಿತ್ತು. ಭಾರತ ಪುರುಷರ ತಂಡದ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ವಹಿಸಿದ್ದರು. ಮಹಿಳಾ ಭಾರತೀಯ ಕ್ರಿಕೆಟ್ ತಂಡದ ಸಾರಥ್ಯವನ್ನು ಹರ್ಮನ್ಪ್ರೀತ್ ಕೌರ್ ವಹಿಸಿಕೊಂಡರು.