Wednesday, May 1, 2024
Homeರಾಜ್ಯಪ್ರಭಾವಿಗಳಿಗೆ ನೋಟಿಸ್ ನೀಡಲು ಆದಾಯ ತೆರಿಗೆ ಇಲಾಖೆ ಸಜ್ಜು

ಪ್ರಭಾವಿಗಳಿಗೆ ನೋಟಿಸ್ ನೀಡಲು ಆದಾಯ ತೆರಿಗೆ ಇಲಾಖೆ ಸಜ್ಜು

ಬೆಂಗಳೂರು,ಅ.14- ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದಲ್ಲಿ ಸಿಕ್ಕಿಬಿದ್ದಿದ್ದ 42 ಕೋಟಿ ನಗದು ಹಾಗೂ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಭಾವಿಗಳಿಗೆ ನೋಟಿಸ್ ನೀಡಲು ಐಟಿ ಸಜ್ಜಾಗಿದೆ. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿ ಮತ್ತು ಸಂಬಂಧಿಕರ ಮೇಲೆ ಐಟಿ ಅಧಿಕಾರಿಗಳು ಸತತವಾಗಿ ಮೂರು ದಿನ ಶೋಧ ನಡೆಸಿದ್ದರು.

ಅದಾದ ನಂತರ ರಾಜ್ಯದಲ್ಲಿ ನಡೆದಿರುವ ಅತಿದೊಡ್ಡ ಐಟಿ ದಾಳಿ ಇದಾಗಿದ್ದು, 42 ಕೋಟಿ ನಗದು, ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣಗಳು ಸಿಕ್ಕಿಬಿದ್ದಿರುವುದರ ಹಿಂದೆ ನಿಜವಾದ ನಾಯಕನನ್ನು ಪತ್ತೆ ಹಚ್ಚಲು ಐಟಿ ಮುಂದಾಗಿದೆ. ಗುರುವಾರ ಸಂಜೆ 6 ಗಂಟೆಯಿಂದ ಸತತ 40 ಗಂಟೆಗೂ ಅಧಿಕ ಕಾಲ ಅಂಬಿಕಾಪತಿ ಮನೆ, ಸಂಬಂಧಿಕರ ನಿವಾಸ, ಕಚೇರಿ ಸೇರಿದಂತೆ ಇಂಚಿಂಚು ಮಾಹಿತಿಯನ್ನು ಹೊರತೆಗೆಯುತ್ತಿರುವ ಐಟಿ ಅಧಿಕಾರಿಗಳಿಗೆ ಇದರ ಹಿಂದೆ ಕಾಣದ ಪ್ರಭಾವಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾನ್ಯತಾಟೆಕ್ ಪಾರ್ಕ್‍ನಲ್ಲಿ ಅಂಬಿಕಾಪತಿ ಒಡೆತನಕ್ಕೆ ಸೇರಿದ ಮನೆಯ ಲಾಕರ್‍ನೊಳಗೆ ಸಿಕ್ಕಿರುವ ಸೂಟ್‍ಕೇಸ್ ಹಲವರಿಗೆ ಕಂಟಕವಾಗುವ ಸಾಧ್ಯತೆ ಇದೆ.

ಸೈನಿಕರ ಬಲಿದಾನಕ್ಕಿಂತ ಹೆಚ್ಚಾಯ್ತಾ ಕ್ರಿಕೆಟ್ : ಬಿಸಿಸಿಐ ವಿರುದ್ಧ ರೊಚ್ಚಿಗೆದ್ದ ದೇಶಪ್ರೇಮಿಗಳು

ಏಕೆಂದರೆ ಇದರಲ್ಲಿ ಉಮಾಪತಿ ಕೆಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಪ್ರಾರಂಭದಲ್ಲಿ ಇದನ್ನು ತೆಗೆಯಲು ಹಿಂದೇಟು ಹಾಕಿದಾಗಲೇ ಐಟಿ ಅಕಾರಿಗಳಿಗೆ ಮತ್ತಷ್ಟು ಅನುಮಾನ ಮೂಡಿಬಂದು ಬಲವಂತವಾಗಿ ತೆರೆಸಿದರು. ಆಗ ಸೂಟ್‍ಕೇಸ್‍ನಲ್ಲಿದ್ದ ಕೆಲವು ದಾಖಲೆಗಳು ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.

ಈ ಹಣ ಎಲ್ಲಿಂದ ಬಂತು? ಯಾರಿಗೆ ಕೊಡಬೇಕಿತ್ತು? ಯಾರಿಂದ ಸಂಗ್ರಹಿಸಲಾಗಿತ್ತು? ಎಂಬುದರ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ. ಹಣವನ್ನು ಬೆಂಗಳೂರಿನಿಂದ ಚೆನ್ನೈಗೆ ತೆಗೆದುಕೊಂಡು ಹೋಗಿ ಯಾರಿಗೆ ತಲುಪಿಸಬೇಕು, ಅಲ್ಲಿಂದ ಎಲ್ಲಿಗೆ ಹೋಗಬೇಕು ಹೀಗೆ ಪ್ರತಿಯೊಂದು ವಿವರಗಳನ್ನು ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.

ಈ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡಿರುವ ಐಟಿ ಅಧಿಕಾರಿಗಳು ಕೆಲವು ಪ್ರಭಾವಿ ವ್ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ದತೆ ನಡೆಸಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು, ಗುತ್ತಿಗೆದಾರರು, ಮಧ್ಯವರ್ತಿಗಳು ಹೀಗೆ ಹಲವರು ಶಾಮೀಲಾಗಿರುವ ಸಾಧ್ಯತೆ ಇರುವುದರಿಂದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೆತ್ತಿಕೊಳ್ಳಲು ಐಟಿ ಮುಂದಾಗಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ 42 ಕೋಟಿ ರೂ. ಪ್ರತಿಧ್ವನಿ

ಪ್ರಭಾವಿಗಳಿಗೆ ನಡುಕ:
ಗುತ್ತಿಗೆದಾರನ ಬಳಿ ಐದು ಕೋಟಿಗೂ ಹೆಚ್ಚು ಹಣ ಸಿಕ್ಕಿಬಿದ್ದಿರುವುದರಿಂದ ಇದೀಗ ಪ್ರಭಾವಿ ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ನಡುಕ ಆರಂಭವಾಗಿದೆ. ಮೂಲಗಳ ಪ್ರಕಾರ ಸದ್ಯದಲ್ಲೇ ಹಲವರಿಗೆ ನೋಟಿಸ್ ನೀಡಲು ಐಟಿ ಸಜ್ಜಾಗಿರುವುದರಿಂದ ಯಾರ ಕೊರಳಿಗೆ ಹುರುಳಾಗಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

RELATED ARTICLES

Latest News