Saturday, October 19, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಪಶ್ಚಿಮ ಘಟ್ಟದ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

Crowded tourist spots in Western Ghats

ಚಿಕ್ಕಮಗಳೂರು, ಅ.19- ಜಿಲ್ಲೆಯ ಅತ್ಯಂತ ಸೂಕ್ಹ್ಮ ಪ್ರದೇಶಗಳು ಹಾಗೂ ಪ್ರವಾಸಿ ಆಕರ್ಷಣೆಯ ಸ್ಥಳಗಳೂ ಆದ ಪಶ್ಚಿಮಘಟ್ಟದ ಗಿರಿ ಪಂಕ್ತಿಯಲ್ಲಿ ಮತ್ತೆ ಪ್ರವಾಸಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿದೆ. ದಸರಾ ಹಬ್ಬದ ರಜೆ ಜೊತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಮೂರು ದಿನಗಳ ಕಾಲ ರಜೆ ಇದ್ದ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ಗಿರಿ ಪ್ರದೇಶಕ್ಕೆ ಮತ್ತು ಜಿಲ್ಲೆಯ ದೇವರಮನೆ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಉಂಟಾದ ಕಿಕ್ಕಿರಿದ ಜನಸಂದಣಿ ಹಾಗೂ ವಾಹನ ದಟ್ಟಣೆಯಿಂದ ಈ ಸೂಕ್ಹ್ಮ ಪ್ರದೇಶಗಳು ಬಳಲಿದರೆ, ಸ್ಥಳೀಯ ಜನಜೀವನದ ಮೇಲೂ ಪರಿಣಾಮ ಬೀರಿತು. ಉದಾಹರಣೆಗೆ ಹೇಳುವುದಾದರೆ ಮುಳ್ಳಯ್ಯನಗಿರಿ ಸೇರಿದಂತೆ ಈ ಬೆಟ್ಟ ಶ್ರೇಣಿಗೆ ಅಂದು ದಿನವೊಂದಕ್ಕೆ ಬಂದ ವಾಹನಗಳ ಸಂಖ್ಯೆಅಂದಾಜು ಎರಡು ಸಾವಿರದಷ್ಟಿತ್ತು.

ಜಿಲ್ಲಾಡಳಿತ ಈ ಹಿಂದೆ ಪ್ರವಾಸಿ ತಾಣದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಆನ್‌ಲೈನ್ ಬುಕ್ಕಿಂಗ್ ಮೂಲಕ ಪ್ರವಾಸಿಗರು ಹಾಗೂ ವಾಹನಗಳು ಕಿಕ್ಕಿರಿದು ಸೇರುವುದನ್ನು ತಡೆದು ದಟ್ಟಣೆ ಮತ್ತು ಈ ಪ್ರದೇಶದ ಮೇಲಾಗುವ ಒತ್ತಡವನ್ನು ಕಡಿತಗೊಳಿಸಲು ಆಲೋಚನೆ ಮಾಡಿತ್ತು. ಆದರೆ ಅದನ್ನು ಕಾರ್ಯಗತಗೊಳಿಸುವ ಯಾವ ಸೂಚನೆಯೂ ಈವರೆಗೂ ಕಂಡು ಬಂದಿಲ್ಲ.

ಜಿಲ್ಲಾಡಳಿತ ಆನ್‌ಲೈನ್ ಬುಕ್ಕಿಂಗ್ ಜೊತೆಗೆ ಹೊರಗಿನಿಂದ ಬರುವ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸುವುದು ಹಾಗೂ ಆ ಸ್ಥಳದಿಂದ ಮಿನಿ ಬಸ್ ಮತ್ತು ಸರ್ಕಾರದಿಂದ ನೋಂದಾಯಿತ ಜೀಪ್‌ಗಳಲ್ಲಿ ತೆರಳುವ ವ್ಯವಸ್ಥೆ ಮಾಡುವ ಮೂಲಕ ಜನ ಹಾಗೂ ವಾಹನ ದಟ್ಟಣೆ ನಿಯಂತ್ರಿಸುವುದಾಗಿ ತಿಳಿಸಿತ್ತು. ಆದರೆ ಈ ಪರಿಹಾರಗಳಲ್ಲಿ ಯಾವುದೂ ಈವರೆಗೂ ಕಾರ್ಯಗತವಾಗಿಲ್ಲ. ಈ ಸೂಕ್ಹ್ಮ ಪ್ರದೇಶಗಳಲ್ಲಿ ಜನ, ವಾಹನ ದಟ್ಟಣೆ ಜೊತೆಗೆ ಎಲ್ಲೆಂದರಲ್ಲಿ ಸಣ್ಣ ಗೂಡಂಗಡಿಗಳು ತಲೆಯೆತ್ತುತ್ತಿದ್ದು, ಜೊತೆಗೆ ಪ್ರವಾಸಿಗರು ಹಾಕುವ ಘನತ್ಯಾಜ್ಯದ ಪ್ರಮಾಣವು ಅಧಿಕವಾಗಿ ಈ ಹಸಿರು ಪರಿಸರವನ್ನು ಹಾಳುಗೆಡವುತ್ತಿವೆ. ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆಯೂ ಆಗುತ್ತಿಲ್ಲ. ಅದನ್ನು ನಿಯಂತ್ರಿಸುವ ಅಥವಾ ತಡೆಗಟ್ಟುವ ಕೆಲಸವೂ ಕಂಡು ಬರುತ್ತಿಲ್ಲ

ಈ ಬೆಟ್ಟ ಪ್ರದೇಶಗಳು ಹಾಗೂ ಪ್ರಕೃತಿ ಸೌಂದರ್ಯದ ತಾಣಗಳು ಕೇವಲ ನೋಡುಗರಿಗೆ ಹೃನ್ಮನ ತಣಿಸುವ ಪ್ರದೇಶಗಳು ಮಾತ್ರವಲ್ಲ. ಈ ಪ್ರದೇಶಗಳಲ್ಲಿ ಸೂಕ್ಷ÷್ಮ ಸಸ್ಯಗಳಿಂದ ಹಿಡಿದು ವನ್ಯಪ್ರಾಣಿಗಳ ಓಡಾಟವೂ ಇದೆ. ಇಲ್ಲಿ ಪ್ಲಾಸ್ಟಿಕ್ ಹಾವಳಿ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳು, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ವಿಪರೀತವಾಗಿ ಇದು ಪರಿಸರಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ, ನೀರಿನ ಮೂಲಗಳನ್ನು ಹಾಳುಗೆಡವುತ್ತಿದೆ. ಜನ, ವಾಹನ ದಟ್ಟಣೆ ಮಿತಿ ಮೀರಿ ಈಗಾಗಲೇ ಹಲವು ರೀತಿಯ ಹೊಸ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿವೆ.

ಪ್ರವಾಸಿಗರ ಸಂಖ್ಯೆ ಜಾಸ್ತಿಯಾದಂತೆ ಈ ಪ್ರದೇಶಕ್ಕೆ ಒತ್ತಾಗಿರುವ ಖಾಸಗಿ ಜಾಗಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ಇನ್ನೂ ಕೆಲವು ಕಡೆ ಹಸಿರನ್ನು ಧ್ವಂಸಗೊಳಿಸಿ ಆ ಪ್ರದೇಶವನ್ನು ವಸತಿ ಸ್ಥಳವಾಗಿ ಮಾರ್ಪಡಿಸಿ ಕೆಲವು ಸಂದರ್ಭದಲ್ಲಿ ಅದನ್ನು ಮಾರಾಟ ಮಾಡಿರುವ ಪ್ರಕರಣಗಳು ನಡೆಯುತ್ತಿವೆ.

ಈ ತಿಂಗಳ 31ರಿಂದ ನವೆಂಬರ್ 3ರ ವರೆಗೂ ಸಾರ್ವತ್ರಿಕ ರಜಾ ದಿನಗಳು ಬರುವುದರಿಂದ ಮತ್ತೆ ಈ ಪ್ರದೇಶಗಳಲ್ಲಿ ಸಾವಿರಾರು ಜನ ಹಾಗೂ ವಾಹನಗಳ ಹಾವಳಿ ಹೆಚ್ಚಾಗುವುದು ಖಚಿತವಾಗಿದೆ. ಜಿಲ್ಲಾಡಳಿತ ತಕ್ಷಣ ಈ ಪ್ರದೇಶಗಳ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಒತ್ತಾಯಿಸುತ್ತೇವೆ. ಪ್ರವಾಸಿ ನಿಯಂತ್ರಣ ವ್ಯವಸ್ಥೆಯನ್ನು ಈಗಾಗಲೇ ರೂಪಿಸಿರುವ ನೀತಿಗನುಗುಣವಾಗಿ ಜಾರಿ ಗೊಳಿಸಬೇಕೆಂದು ಭದ್ರಾ ವೈಲ್ಡ್ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ, ಗಿರಿಜಾ ಶಂಕರ, ಮಾಜಿ ಗೌರವ ವನ್ಯಜೀವಿ ಪರಿಪಾಲಕ ಶ್ರೀದೇವ್ ಹುಲಿಕೆರೆ ಮನವಿಮಾಡಿದ್ದಾರೆ.

RELATED ARTICLES

Latest News