Friday, November 22, 2024
Homeರಾಜ್ಯರೇಣುಕಾಸ್ವಾಮಿ ಪ್ರಕರಣದಲ್ಲಿ ಹಲವು ಅನುಮಾನ ಮೂಡಿಸಿದೆ ಪೊಲೀಸರು ನಡೆ : ಸಿ.ಟಿ.ರವಿ

ರೇಣುಕಾಸ್ವಾಮಿ ಪ್ರಕರಣದಲ್ಲಿ ಹಲವು ಅನುಮಾನ ಮೂಡಿಸಿದೆ ಪೊಲೀಸರು ನಡೆ : ಸಿ.ಟಿ.ರವಿ

ಬೆಂಗಳೂರು,ಜೂ.14- ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪ ಹೊತ್ತ ಚಿತ್ರನಟ ದರ್ಶನ್‌ ಅವರನ್ನು ರಕ್ಷಣೆ ಮಾಡಲು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಪ್ರಯತ್ನಿಸಿದಂತೆ ಕಾಣಿಸುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಠಾಣೆಗೆ ಶಾಮಿಯಾನ ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ರೇಣುಕಾಸ್ವಾಮಿ ಹತ್ಯೆ ಮನುಕುಲ ಕ್ಷಮಿಸುವಂತದ್ದಲ್ಲ. ಯಾವುದೇ ನಾಗರಿಕ ಸಮಾಜವು ಒಪ್ಪುವುದಿಲ್ಲ. ಆದರೆ ಪೊಲೀಸರ ವರ್ತನೆ ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ರೂಪಿಸಿದಂತೆ ಕಾಣುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದಲಾದರೂ ಪೊಲೀಸರು ಸರಿಯಾಗಿ ನಡೆದುಕೊಳ್ಳಿ, ಜನರನಂಬಿಕೆ ಉಳಿಸಿಕೊಳ್ಳುವ ಕೆಲಸ ನೀವು ಮಾಡದಿದ್ದರೆ ಮನುಕುಲ ಕ್ಷಮಿಸುವುದಿಲ್ಲ ಎಂದು ಶಾಪ ಹಾಕಿದರು.

ಪೊಲೀಸ್‌‍ ಠಾಣೆಗೆ ಶಾಮಿಯಾನ ಹಾಕಿರುವುದು ಮಾಧ್ಯಮಗಳಿಗೆ ನಿರ್ಬಂಧ, ಠಾಣೆಯ ಸುತ್ತಮುತ್ತ 200 ಮೀಟರ್‌ ಸೆಕ್ಷನ್‌ ಜಾರಿ ಮಾಡಿರುವುದನ್ನು ಅವಲೋಕಿಸಿದರೆ ಪೊಲೀಸ್‌‍ ಠಾಣೆಯೊಳಗೆ ಏನೋ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಪ್ರಕರಣದಲ್ಲಿ ಪಾರದರ್ಶಕತೆಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಅನುಮಾನ ನನಗೆ ಮಾತ್ರವಲ್ಲ. ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ. ಅವರ ಸಂಶಯಗಳನ್ನು ಮುಖ್ಯಮಂತ್ರಿ, ಡಿಸಿಎಂ, ಗೃಹಸಚಿವರು ನಿವಾರಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳು ಪೊಲೀಸರಿಗೆ ದೊಡ್ಡ ಮಟ್ಟದ ಆಫರ್‌ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ರಜಾದಲ್ಲಿದ್ದ ಸಬ್‌ ಇನ್‌ಸ್ಪೆಕ್ಟರ್‌ ಅವರೊಬ್ಬರನ್ನು ಏಕಾಏಕಿ ಕರ್ತವ್ಯಕ್ಕೆ ಕರೆಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.
ಮೃತ ರೇಣುಕಾಸ್ವಾಮಿಗೆ 15 ಕಡೆ ಗಾಯಗಳಾಗಿವೆ. ಆತ ಸಾಯುವವರೆಗೂ ಬಿಡದೆ ಹೊಡೆದು ಸಾಯಿಸಿದ್ದಾರೆ. ಮರ್ಮಾಂಗಕ್ಕೆ ರಾಡಿನಿಂದ ಒಡೆದು ಕೊಲೆ ಮಾಡಲಾಗಿದೆ.

ವೃತ್ತಿಪರ ರೌಡಿಗಳು ಕೂಡ ಈ ರೀತಿ ಹತ್ಯೆ ಮಾಡುವುದಿಲ್ಲ. ಸಾವಿನ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.ರೇಣುಕಾಸ್ವಾಮಿ ಪತ್ನಿ ಈಗ 5 ತಿಂಗಳ ಗರ್ಭಿಣಿ. ಬೇಕರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಅವರಿಗೆ ಯಾರು ಆಸರೆ, ಸರ್ಕಾರ ಅವರಿಗೆ ಆರ್ಥಿಕ ನೆರವು ನೀಡಲಿ. ಜೊತೆಗೆ ಪಿಯುಸಿ ಓದಿರುವ ಸಹನಾ ಅವರಿಗೆ ಮಾನವೀಯತೆ ದೃಷ್ಟಿಯಿಂದ ಸರ್ಕಾರಿ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.

ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದೆ. ಅತ್ಯಂತ ಬಡ ಕುಟುಂಬ ಅನಾಥವಾಗಿದೆ. ಆ ಕುಟುಂಬ 15 ಕಡೆ ರೇಣುಕಾಸ್ವಾಮಿ ಮೈಮೇಲೆ ಗಾಯಗಳಾಗಿವೆ ಭೀಕರವಾಗಿ ಹಿಂಸೆ ನೀಡಿ ಕೊಂದಿದ್ದಾರೆ.ಮರ್ಮಾಂಗದಲ್ಲಿ ರಕ್ತ ಬಂದಿದೆ. ರೌಡಿಗಳೂ ಕೊಲೆ ಮಾಡುವ ರೀತಿ ಮಾಡಿದ್ದಾರೆ ತಪ್ಪಿತಸ್ತರ ಜನ್ಮ ಜಾಲಾಡಬೇಕು ಎಂದರು.

ರಾಜ್ಯದಲ್ಲಿ ನೇಹಾ, ಅರ್ಜುನ್‌ ಮಡಿವಾಳ್‌ ಹೀಗೆ ನಿರಂತರ ಹತ್ಯೆ ಆಗ್ತಿದೆ. ಸರ್ಕಾರ ಯಾವ ಕ್ರಮವೂ ವಹಿಸುತ್ತಿಲ್ಲ. ಕಾನೂನು ಸುವ್‌ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರದ ಯಾವ ಪ್ರತಿನಿಧಿಯು ರೇಣುಕಾಸ್ವಾಮಿ ಮನೆಗೆ ಹೋಗಿಲ್ಲ. ಪ್ರಕರಣ ನಡೆದು ಇಷ್ಟು ದಿನಗಳಾದರೂ ರೇಣುಕಾಸ್ವಾಮಿ ಮನೆಗೆ ಸಿಎಂ, ಸಚಿವರು, ಸ್ಥಳೀಯ ಶಾಸಕರು ಹೋಗಿಲ್ಲ. ದರ್ಶನ್‌ ಆಗಿರಲಿ, ಬೇರೆಯವರೇ ಆಗಿರಲಿ, ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

RELATED ARTICLES

Latest News