ಮಂಗಳೂರು,ಏ. 12: ಪ್ರಯಾಣಿಕನೊಬ್ಬ ಗುದನಾಳದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದದನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿ 58 ಲಕ್ಷ ರೂ ಮೌಲ್ಯದ 812 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಕಳೆದ ರಾತ್ರಿ ದಮ್ಮಾಮ್‍ನಿಂದ ಇಲ್ಲಿಗೆ ವಿಮಾನದಲ್ಲಿ ಆಗಮಿಸುತ್ತಿದ್ದ ಪ್ರಯಾಣಿಕರೊಬ್ಬ ಹೊರಹೋಗುವಾಗ ಮೆಟಲ್ ಡಿಟೆಕ್ಟರ್ ಪರೀಕ್ಷೆಯ ಸಮಯದಲ್ಲಿ, ಸೊಂಟದ ಬಳಿ ಬೀಪ್ ಶಬ್ದ ಹೊರಹೊಮ್ಮಿದೆ.
ಅನುಮಾನ ಬಂದು ಆತನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಆತ ತನ್ನು ಗುದನಾಳದಲ್ಲಿ ಮೂರು ಸುತ್ತಿನ ರಿಂಗ್ ಆಕಾರದ ವಸ್ತುಗಳೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ನಂತರ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಹೊರತೆಗೆಯಲಾಯಿತು.ಪರಿಶೀಲಿಸಿದಾಗ 24-ಕ್ಯಾರೆಟ್‍ನ 812 ಗ್ರಾಂ ಚಿನ್ನ ಇರುವುದು ತಿಳಿದುಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಲಾಗಿದೆ.