Saturday, November 2, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-04-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-04-2024)

ನಿತ್ಯ ನೀತಿ : ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು ನಿನ್ನನ್ನು ಒಂದೊಂದು ನಿಮಿಷವೂ… ಯೋಚನೆ ಮಾಡಿಸುತ್ತದೆ.

ಪಂಚಾಂಗ : ಶುಕ್ರವಾರ, 12-04-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ರೋಹಿಣಿ / ಯೋಗ: ಸೌಭಾಗ್ಯ / ಕರಣ: ಭವ
ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.32
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿಭವಿಷ್ಯ :
ಮೇಷ
: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.
ವೃಷಭ: ನೀವು ಆಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ಸೋಲಬೇಕಾಗುತ್ತದೆ. ಕೃಷಿ ಬಗ್ಗೆ ಆಸಕ್ತಿ ಮೂಡಲಿದೆ.
ಮಿಥುನ: ಕೆಲಸ-ಕಾರ್ಯಗಳಲ್ಲಿ ತೊಂದರೆಯಾಗ ಲಿದೆ. ಅನಗತ್ಯ ಖರ್ಚು ಮಾಡುವಿರಿ.

ಕಟಕ: ಕುಟುಂಬದಲ್ಲಿ ಸೌಹಾರ್ದಯುತ ವಾತಾ ವರಣ ಇರುವುದು. ಸಾಲ ತೀರಿಸಿದ ನೆಮ್ಮದಿ ಸಿಗಲಿದೆ.
ಸಿಂಹ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ಕನ್ಯಾ: ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರುವವರಿಗೆ ನಷ್ಟ ಉಂಟಾಗಲಿದೆ.
ತುಲಾ: ಯೋಗಾಭ್ಯಾಸದಿಂದ ಆರೋಗ್ಯ ಚೆನ್ನಾಗಿರುವುದು.

ವೃಶ್ಚಿಕ: ಧ್ಯಾನ, ಭಜನೆಯಿಂದ ನೆಮ್ಮದಿ ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.
ಧನುಸ್ಸು: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
ಮಕರ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.
ಕುಂಭ: ಹಣಕಾಸಿನ ವ್ಯತ್ಯಾಸಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಮೀನ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.

RELATED ARTICLES

Latest News