Thursday, September 19, 2024
Homeಬೆಂಗಳೂರುಸೈಬರ್ ಕ್ರೈಂ ಭೇದಿಸುವಲ್ಲಿ ಹಿಂದೆ ಬಿದ್ದ ಬೆಂಗಳೂರು ಪೊಲೀಸರು..!

ಸೈಬರ್ ಕ್ರೈಂ ಭೇದಿಸುವಲ್ಲಿ ಹಿಂದೆ ಬಿದ್ದ ಬೆಂಗಳೂರು ಪೊಲೀಸರು..!

ಬೆಂಗಳೂರು,ಜ.4- ಕಳೆದ ವರ್ಷ ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದ್ದು, ಉತ್ತರ ವಿಭಾಗದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಗರದ 8 ವಿಭಾಗಗಳು ಹಾಗೂ ಒಂದು ಸೈಬರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021 ನೇ ಸಾಲಿನಲ್ಲಿ 6422 ಪ್ರಕರಣ ದಾಖಲಾದರೆ 2022ರಲ್ಲಿ 9940 ಹಾಗೂ 2023ಲ್ಲಿ 17623 ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಸಿದರೆ ಸೈಬರ್ ಅಪರಾಧ ಪ್ರಕರಣಗಳು ಗಣನೀಯ ವಾಗಿ ಹೆಚ್ಚಳವಾಗಿವೆ.

ಉತ್ತರ ಭಾಗ ಮೊದಲನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು ಅಂದರೆ 3260 ಪ್ರಕರಣಗಳು ಪೈಕಿ 238 ಪತ್ತೆಹಚ್ಚಿದರೆ, 2809 ಪ್ರಕರಣಗಳು ಬಾಕಿಯಿವೆ. ಆಗ್ನೇಯ ವಿಭಾಗ 2ನೇ ಸ್ಥಾನದಲ್ಲಿದ್ದು , 2674 ಪ್ರಕರಣಗಳ ಪೈಕಿ 298 ಪ್ರಕರಣವನ್ನ ಪತ್ತೆ ಹಚ್ಚಿದರೆ, 2319 ಪ್ರಕರಣಗಳು ಪತ್ತೆ ಕಾರ್ಯ ಬಾಕಿಯಿವೆ. ವೈಟ್‍ಫೀಲ್ಡ್ ವಿಭಾಗದ 3ನೇ ಸ್ಥಾನದಲ್ಲಿದ್ದು, 2562 ಪ್ರಕರಣಗಳ ಪೈಕಿ 55 ಪತ್ತೆಯಾದರೆ, 2394 ಪ್ರಕರಣಗಳು ಬಾಕಿಯಿವೆ.

75 ವರ್ಷದ ನಂತರ ಕಾಶ್ಮೀರ ಗಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ

2023 ನೇ ಸಾಲಿನಲ್ಲಿ ಕೇಂದ್ರ ವಿಭಾಗ 1126 ಪ್ರಕರಣ, ಪಶ್ಚಿಮ ವಿಭಾಗ 1941,ದಕ್ಷಿಣ 2094, ಪೂರ್ವ 1994, ಈಶಾನ್ಯ 1917 ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 55 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಈ 9 ಪೊಲೀಸ್ ಠಾಣೆಗಳಲ್ಲಿ ಒಟ್ಟು 17,623 ಪ್ರಕರಣಗಳ ಪೈಕಿ 14,285 ಪ್ರಕರಣಗಳ ಪತ್ತೆ ಕಾರ್ಯ ಕ್ಷೀಣವಾಗಿದೆ.
ಪ್ರಕರಣಗಳು ದಾಖಲಾಗಲು ಪ್ರಮುಖ ಕಾರಣವಂದರೆ ಸೈಬರ್ ಟಿಪ್‍ಲೈನ್, ಎನ್‍ಸಿಆರ್‍ಪಿ ಪೋರ್ಟಲ್, 112 ಮುಖಾಂತರ ದಾಖಲಾದ ದೂರುಗಳನ್ನು ಎಫ್‍ಐಆರ್ ದೂರುಗಳನ್ನು ಎಫ್‍ಐಆರ್ ಗಳನ್ನಾಗಿ ಪರಿವರ್ತಿಸಿರುವುದು.

ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮಾಡಲಾಗಿರುವ ಕಾರಣ, ಅಲ್ಲದೆ ಸಿನ್ ಪೊಲೀಸ್ ಠಾಣೆ ಹೊರತುಪಡಿಸಿ ನಗರದ ಎಲ್ಲಾ ಪೊಲೀಸ್ ಠಾಣೆಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿರುವುದೇ ದೂರುಗಳು ಹೆಚ್ಚಾಗಿ ದಾಖಲಾಗಲು ಕಾರಣವಾಗಿದೆ.

RELATED ARTICLES

Latest News