Saturday, November 23, 2024
Homeಬೆಂಗಳೂರುಸೈಬರ್ ವಂಚನೆ : ಬೆಂಗಳೂರಿನ ಇಬ್ಬರಿಗೆ 95 ಲಕ್ಷರೂ. ನಾಮ

ಸೈಬರ್ ವಂಚನೆ : ಬೆಂಗಳೂರಿನ ಇಬ್ಬರಿಗೆ 95 ಲಕ್ಷರೂ. ನಾಮ

ಬೆಂಗಳೂರು, ನ.4- ಖ್ಯಾತ ಉದ್ಯಮಿಗಳ ನಕಲಿ ವಿಡಿಯೋಗಳನ್ನು ತೋರಿಸಿ ಸೈಬರ್ ವಂಚಕರು ಹೂಡಿಕೆ ನೆಪದಲ್ಲಿ ಸುಮಾರು 95 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ಹೆಚ್ಚಿನ ಆದಾಯವನ್ನು ನೀಡುವ ಭರವಸೆಯ ಮೇಲೆ ವಂಚಕರು ಸೃಷ್ಟಿಸಿದ ನಕಲಿ ವೆಬ್ಸೈಟ್ಗಳನ್ನು ನಂಬಿ ಅದರಲ್ಲಿನ ವೀಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಮತ್ತು ಕೆಲವು ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ಮಾಡಿ ಲಕ್ಷಾಂತರ ರೂ.
ಕಳೆದುಕೊಂಡು ಈಗ ಕೊನೆಗೆ ಸೈಬರ್ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಬನಶಂಕರಿ ನಿವಾಸಿ ಮಹಿಳೆಯೊಬ್ಬರು ಹಣ ಹೂಡಿಕೆಯ ಮೇಲೆ ಹೆಚ್ಚಿನ ಆದಾಯದ ಪ್ರಚಾರ ನೀಡುವ ವೀಡಿಯೊವನ್ನು ನೋಡಿ ಆಕರ್ಷಿತರಾಗಿದ್ದಾರೆ. ವೆಬ್ಸೈಟ್ನಲ್ಲಿ ಲಿಂಕ್ ಕ್ಲಿಕ್ ಮಾಡಿದ್ದಾರೆ ಮತ್ತು ತಮ ವಿವರಗಳನ್ನು ಹಂಚಿಕೊಂಡಿದ್ದಾರೆ. ನಂತರ ಕೆಲ ನಿಮಿಷದಲ್ಲಿ ಆಕೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದು ಆತ ಕಂಪನಿಯ ಏಜೆಂಟ್ ಎಂದು ಹೇಳಿಕೊಂಡು ಹೆಚ್ಚಿನ ಆದಾಯಕ್ಕಾಗಿ ಹಣ ಹೂಡಿಕೆ ಮಾಡಲು ಮನವೊಲಿಸಿದ್ದ.

ಆತನ ಮಾತಿಗೆ ಮರುಳಾಗಿ ಆರಂಭದಲ್ಲಿ ಸುಮಾರು 1.4 ಲಕ್ಷ ರೂಪಾಯಿ ಹೂಡಿಕೆ ಮಾಡಿದಾಗ 8,000 ರೂಪಾಯಿ ರಿಟರ್ನ್್ಸಬಂದಿದೆ ನಂತರ ಎರಡನೇ ಬಾರಿಗೆ 6.7 ಲಕ್ಷ ರೂಪಾಯಿ ಹೂಡಿಕೆ ಮಾಡಿದಾಗ ಯಾವುದೇ ರಿಟರ್ನ್್ಸ ಸಿಗಲಿಲ್ಲ .ಕೊನೆಗೆ ಹೂಡಿಕೆ ಮಾಡಿದ ಹಣವನ್ನೂ ಕಳೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಆಕೆ ಮತ್ತೊಂದು ವೇದಿಕೆಯಲ್ಲಿ ಸುಮಾರು 67 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೆಯ ಪ್ರಕರಣದಲ್ಲಿ, ನಿವೃತ್ತ ಉದ್ಯೋಗಿಯೊಬ್ಬರು ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ಭರವಸೆ ನೀಡುವ ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊ ನಂಬಿ ಹಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ವಂಚಕರನ್ನು ನಂಬಿ ಅವರು ಹೇಳಿದ್ದ ಎರಡು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ಸುಮಾರು 19 ಲಕ್ಷ ರೂ ವರ್ಗಾಯಿಸಿ ಮೋಸ ಹೋಗಿದಾರೆ.

ಸೈಬರ್ ವಂಚಕರು ಗಣ್ಯರ ಸಭೆಗಳ ವೀಡಿಯೊಗಳನ್ನು ಬಳಸಿಕೊಂಡು ಹಣ ಲಪಟಾಯಿಸಿದ್ದಾರೆ. ಇಂತಹ ನಕಲಿ ವೀಡಿಯೊಗಳನ್ನು ನಂಬಿ ಕೆಲವರು ತೊಂದರೆಗೆ ಸಿಲುಕಿದ್ದಾರೆ.ವಂಚಕರು ಅಮಾಯಕರನ್ನು ಬಲೆಗೆ ಬೀಳಿಸಲು ವೆಬ್ಸೈಟ್ಗಳನ್ನು ಕೂಡ ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಈ ಬಗ್ಗೆ ಸಿಇಎನ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News