Thursday, December 12, 2024
Homeರಾಜ್ಯಸಚಿವ ಜಮೀರ್ ರಿಂದ ಲ್ಯಾಂಡ್ ಜಿಹಾದ್ : ಅಶೋಕ್ ವಾಗ್ದಾಳಿ..

ಸಚಿವ ಜಮೀರ್ ರಿಂದ ಲ್ಯಾಂಡ್ ಜಿಹಾದ್ : ಅಶೋಕ್ ವಾಗ್ದಾಳಿ..

ಬೆಂಗಳೂರು,ನ.4- ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡಿದಂತೆ ಈಗ ಸಚಿವ ಜಮೀರ್ ಅಹಮದ್ ಖಾನ್ ಅವರು ವಕ್್ಫ ಮೂಲಕ ಹಿಂದೂಗಳ ಭೂಮಿ ಕಬಳಿಸಲು ಕಾಂಗ್ರೆಸ್ ಲ್ಯಾಂಡ್ ಜಿಹಾದ್ ನಡೆಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಕೆ.ಆರ್.ಪುರಂನ ತಹಸೀಲ್ದಾರ್ ಕಚೇರಿ ಎದುರು ಪಕ್ಷದ ವತಿಯಿಂದ ನಡೆದ ಪ್ರತಿಭಟನೆ ಮಾತನಾಡಿದ ಅವರು, ಈ ಹಿಂದೆ ಲವ್ ಜಿಹಾದ್ ತುಂಬಿ ನಮ ಮುಗ್ದ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದರು. ಈಗ ಜಮೀರ್ ಎಂಬ ಸಚಿವ, ನಮ ರೈತರು, ಬಡವರು, ಶೋಷಿತರಿಗೆ ಸೇರಿದ ಹಿಂದೂ ಜಮೀನುಗಳನ್ನು ಕಬಳಿಸಲು ಲ್ಯಾಂಡ್ ಜಿಹಾದ್ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಇದು ಒಳ್ಳೆಯ ಲಕ್ಷಣವಲ್ಲ ಎಂದು ಎಚ್ಚರಿಕೆ ಕೊಟ್ಟರು.
ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ. 1974ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು ಎಂದು ಆಗ್ರಹಿಸಿದರು.

ಈ ನೋಟಿಫಿಕೇಷನ್ ಮುಸಲಾನರ ಓಲೈಕೆಗಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಎಲ್ಲ ಪ್ರಕ್ರಿಯೆ ಸ್ಥಗಿತ ಮಾಡಿದ್ದೀವಿ ಅಂದಿದ್ದಾರೆ. ಸಿದ್ದರಾಮಯ್ಯ ಈಗ ಟೋಪಿ ತೆಗೆದಿದ್ದಾರೆ, ಮುಂದೆ ಮತ್ತೆ ಮಸೀದಿಗೆ ಹೋಗಿ ಟೋಪಿ ಹಾಕಿದರೆ ನಂಬುವುದು ಹೇಗೆ? ಇದು ವಕ್್ಫ ಬೋರ್ಡ್ ಆಗಿ ಉಳಿದಿಲ್ಲ, ಸಾಬರ ಬೋರ್ಡ್ ಆಗಿದೆ. ಮೊಹಮದ್ ಘೋರಿ, ಆದಿಲ್ ಷಾಹಿ ಬೋರ್ಡ್ ಆಗಿದೆ ಎಂದು ಕಿಡಿಕಾರಿದರು.

ಎಲ್ಲೆಲ್ಲೂ ರೈತರ ಜಮೀನಿಗೆ ನೊಟೀಸ್ ಕೊಟ್ಟಿದ್ದಾರೆ. ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್್ಫ ಜಾಗ ಎಂದು ಮಾಡಿದ್ದಾರೆ. ಇದು ತುಘಲಕ್ ಸರ್ಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು. ಈ ಭಯೋತ್ಪಾದಕ, ಮತಾಂಧ ಮುಸ್ಲಿಮರು ರಾಜ್ಯದಲ್ಲಿ ಮಗುವಿನಂತೆ ಮಲಗಬಹುದು, ಯಾಕಂದ್ರೆ ಈ ಸರ್ಕಾರ ಅವರ ಪರ ಇದೆ. ಸ್ಲೀಪ್ ಲೈಕ್ ಎ ಬೇಬಿ ಬನ್ನಿ ಅಂತ ಪಾಕಿಸ್ತಾನದವರಿಗೆ ಸಿದ್ದರಾಮಯ್ಯ ಕರೀತಿದ್ದಾರೆ ಎಂದು ಕುಟಕಿದರು

ನ.7ರಂದು ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ:
ಸಿದ್ದರಾಮಯ್ಯ ಪದೇ ಪದೇ ವೋಟ್ ರಾಜಕೀಯಕ್ಕಾಗಿ ಕರ್ನಾಟಕವನ್ನ ಹಾಳು ಮಾಡ್ತಿದ್ದಾರೆ. ಇವರನ್ನು ಯಾರೂ ನಂಬಲ್ಲ. ನಾನು ಶ್ರೀರಂಗಪಟ್ಟಣ ದಲ್ಲಿ ನವೆಂಬರ್ 7ರಂದು ದೊಡ್ಡ ಪ್ರತಿಭಟನೆ ಮಾಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಶಾಲೆಯ ಆಸ್ತಿಯನ್ನೇ ಆಸ್ತಿ ಅಂತಿದ್ದಾರೆ. ಸಿದ್ದರಾಮಯ್ಯ ಹಣೆಗೆ ಮುಡಾ ಹಗರಣ ನಂತರ ಬೊಟ್ಟು ಬಂದಿದೆ. ಈ ಬೊಟ್ಟು ಯಾವಾಗ ತೆಗೆಯುತ್ತಾರೋ ಗೊತ್ತಿಲ್ಲ. ಮುಸ್ಲಿಂ ಟೋಪಿ ಯಾವಾಗ ಹಾಕುತ್ತಾರೆ? ಯಾವಾಗ ತೆಗೀತಾರೆ ಗೊತ್ತಾಗಲ್ಲ. ಒಟ್ಟಿಗೆ ರಾಜ್ಯದಲ್ಲಿರುವ ಎಲ್ಲ ಶಾಲೆ, ದೇವಸ್ಥಾನಗಳನ್ನು ಸಾಬರ ಬೋರ್ಡಿಗೆ ಬರೆದುಕೊಟ್ಟುಬಿಡಿ ಎಂದು ತಿರುಗೇಟು ನೀಡಿದರು.

RELATED ARTICLES

Latest News