Thursday, November 21, 2024
Homeರಾಷ್ಟ್ರೀಯ | Nationalಒಡಿಶಾ-ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ದನಾ ಚಂಡಮಾರುತ ಅಬ್ಬರ

ಒಡಿಶಾ-ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ದನಾ ಚಂಡಮಾರುತ ಅಬ್ಬರ

Cyclone Dana: 178 trains cancelled; evacuations begin in Odisha, Bengal

ಕೋಲ್ಕತ್ತಾ,ಅ.23- ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಳವಾದ ವಾಯುಭಾರ ಕುಸಿತದಿಂದಾಗಿ ಇಂದು ಬೆಳಗ್ಗೆ ದನಾ ಚಂಡಮಾರುತ ತೀವ್ರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ, ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ತೀವ್ರವಾದ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ ಮತ್ತು ಅ. 25 ರ ಮುಂಜಾನೆ 120 ರ ಗಾಳಿಯ ವೇಗದೊಂದಿಗೆ ಪುರಿ ಮತ್ತು ಸಾಗರ್‌ ದ್ವೀಪದ ನಡುವೆ ಒಡಿಶಾ-ಪಶ್ಚಿಮ ಬಂಗಾಳದ ಕರಾವಳಿಯನ್ನು ದಾಟುತ್ತದೆ ಎಂದು ಎಚ್ಚರಿಸಲಾಗಿದೆ.

ಈ ವ್ಯವಸ್ಥೆಯು ಪಾರಾದೀಪ್‌ನ ಆಗ್ನೇಯಕ್ಕೆ 560 ಕಿಮೀ ಮತ್ತು ಸಾಗರ್‌ ದ್ವೀಪದಿಂದ 630 ಕಿಮೀ ದಕ್ಷಿಣ-ಆಗ್ನೇಯಕ್ಕೆ ಬೆಳಿಗ್ಗೆ 5.30 ಕ್ಕೆ ಇದೆ ಎಂದು ಅದು ಹೇಳಿದೆ.ಇಂದಿನಿಂದ 25 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿರುವ ಹವಾಮಾನ ಇಲಾಖೆ, ಇಂದು ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಗಂಟೆಗೆ 60 ಕಿಲೋಮೀಟರ್‌ (ಕಿಮೀ) ವೇಗವನ್ನು ತಲುಪುವ ಸಾಧ್ಯತೆಯಿದೆ ಮತ್ತು ಕ್ರಮೇಣ ಗಂಟೆಗೆ 100-110 ಕಿ.ಮೀ. ಅಕ್ಟೋಬರ್‌ 24 ರ ರಾತ್ರಿಯಿಂದ ಅಕ್ಟೋಬರ್‌ 25 ರ ಬೆಳಿಗ್ಗೆ ವರೆಗೆ ಗಂಟೆಗೆ 120 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಎಚ್ಚರಿಸಿದೆ.

ತೀವ್ರ ಚಂಡಮಾರುತದ ಹಿನ್ನೆಲೆಯಲ್ಲಿ ಆಗ್ನೇಯ ರೈಲ್ವೆ ವ್ಯಾಪ್ತಿಯ ಮೂಲಕ ಚಲಿಸುವ 150 ಕ್ಕೂ ಹೆಚ್ಚು ಎಕ್ಸ್ ಪ್ರೆಸ್‌‍ ಹಾಗೂ ಪ್ಯಾಸೆಂಜರ್‌ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಎಸ್‌‍ಇಆರ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News