Friday, April 4, 2025
Homeರಾಷ್ಟ್ರೀಯ | Nationalಚಲಿಸುತ್ತಿದ್ದ ಬಸ್‍ನಲ್ಲಿ ದಲಿತ ಮಹಿಳೆ ಮೇಲೆ ಚಾಲಕರಿಂದ ಅತ್ಯಾಚಾರ

ಚಲಿಸುತ್ತಿದ್ದ ಬಸ್‍ನಲ್ಲಿ ದಲಿತ ಮಹಿಳೆ ಮೇಲೆ ಚಾಲಕರಿಂದ ಅತ್ಯಾಚಾರ

ಜೈಪುರ,ಡಿ.16- ನಿರ್ಭಯಾ ಪ್ರಕರಣಕ್ಕೆ 10 ವರ್ಷ ತುಂಬುತ್ತಿರುವ ಸಂದರ್ಭದಲ್ಲೇ ಉತ್ತರ ಪ್ರದೇಶದಿಂದ ಜೈಪುರಕ್ಕೆ ಬರುತ್ತಿದ್ದ ಬಸ್ಸಿನಲ್ಲಿ 20 ವರ್ಷದ ದಲಿತ ಮಹಿಳೆಯ ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಡಿ 9 ಮತ್ತು 10 ರ ಮಧ್ಯರಾತ್ರಿ ಖಾಸಗಿ ಬಸ್ ಉತ್ತರ ಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಕ್ಯಾಬಿನ್‍ನಲ್ಲಿ ಕುಳಿತಿದ್ದಾಗ ಚಾಲಕರು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬಿನ್‍ನೊಳಗೆ ಆರಿಫ್ ಮತ್ತು ಲಲಿತ್ ಎಂದು ಗುರುತಿಸಲಾದ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ. ಆರಿಫ್‍ನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಕನೋಟಾ ಪೊಲೀಸ್ ಠಾಣೆಯ ಎಸ್‍ಎಚ್‍ಒ ಭಗವಾನ್ ಸಹಾಯ್ ಮೀನಾ ತಿಳಿಸಿದ್ದಾರೆ. ಲಲಿತ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆತನ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಬಂಧಿತ ಎಬಿವಿಪಿ ಕಾರ್ಯಕರ್ತರನ್ನು ಕ್ಷಮಿಸಲು ಸಿಜೆಗೆ ಚೌಹಾಣ್ ಪತ್ರ

ಸಂತ್ರಸ್ತೆ ಕ್ಯಾಬಿನ್‍ನಲ್ಲಿದ್ದಾಗ ಬಸ್‍ನೊಳಗೆ ಕೆಲವು ಪ್ರಯಾಣಿಕರಿದ್ದರು, ಆದರೆ ಡೋರ್ ಲಾಕ್ ಮಾಡಿ ಕಾಮುಕರು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸಂಭವಿಸಿದಾಗ ಮಹಿಳೆ ಅಲಾರಾಂ ಒತ್ತುವಲ್ಲಿ ಯಶಸ್ವಿಯಾದ್ದರಿಂದ ಬೇರೆ ಪ್ರಯಾಣಿಕರ ಬಸ್ ಅನ್ನು ನಿಲ್ಲಿಸುವಂತೆ ಸೂಚಿಸಿದಾಗ ಲಲಿತ್ ಬಸ್‍ನಿಂದ ಇಳಿದು ಪರಾರಿಯಾಗಿದ್ದರೆ. ಆರಿಫ್ ಅನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News