Thursday, September 19, 2024
Homeರಾಜಕೀಯ | Politics"ದಲಿತರು, ಅಸ್ಪಶ್ಯರು ಹಿಂದೂಗಳಲ್ಲವೇ.. ? ಜಾತಿನಿಂದನೆ ಮಾಡಿದಾಗ ಬಿಜೆಪಿ ನಾಯಕರು ಏಕೆ ಪ್ರಶ್ನಿಸಲ್ಲ..?"

“ದಲಿತರು, ಅಸ್ಪಶ್ಯರು ಹಿಂದೂಗಳಲ್ಲವೇ.. ? ಜಾತಿನಿಂದನೆ ಮಾಡಿದಾಗ ಬಿಜೆಪಿ ನಾಯಕರು ಏಕೆ ಪ್ರಶ್ನಿಸಲ್ಲ..?”

HD Mahadevappa

ಬೆಂಗಳೂರು, ಸೆ.18- ದಲಿತರು, ಅಸ್ಪಶ್ಯರು ಹಿಂದೂ ಧರ್ಮದಲ್ಲಿಲ್ಲವೇ? ಬಿಜೆಪಿ ಶಾಸಕರು ಜಾತಿ ನಿಂದನೆ ಮಾಡಿದಾಗ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಏಕೆ ಅದನ್ನು ಪ್ರಶ್ನಿಸುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಎಂಬುದು ಅಸಂಸದೀಯ ಪದವಲ್ಲ.

ಆದರೆ ಅಸಂಘಟಿತ ವರ್ಗ ಎಂಬುದನ್ನು ಸೂಚಿಸುತ್ತದೆ. ಆದರೆ ಹೊಲೆಯ, ಮಾದಿಗ ಎಂಬ ಪದಗಳು ಅಸ್ಪಶ್ಯತೆ ಆಚರಣೆಗೊಳಪಡುತ್ತವೆ. ಈ ಅಪರಾಧಕ್ಕಾಗಿ ಜಾಮೀನುರಹಿತ ಬಂಧನಕ್ಕೆ ಅವಕಾಶವಿದೆ. ಶಾಸಕ ಮುನಿರತ್ನ ಅವರ ಪ್ರಕರಣದಲ್ಲಿ ಕಾನೂನು ತನ್ನ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ದಲಿತನ ಹೆಸರನ್ನು ಅವರಿಗೆ ಬೇಕಾದಂತೆ ಮಾತನಾಡಿಸಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಅಲ್ಲಿರುವವರಿಗೆ ಧ್ವನಿಯೇ ಇಲ್ಲ. ಆರ್‌ಎಸ್‌‍ಎಸ್ನವರು ಬಿಜೆಪಿಯಲ್ಲಿರುವ ದಲಿತ ನಾಯಕರನ್ನು ಮಾತನಾಡಲು ಬಿಡುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ದಲಿತರು, ಅಸ್ಪಶ್ಯರು ಹಿಂದೂ ಧರ್ಮದಲ್ಲಿ ಇಲ್ಲವೇ? ಹಿಂದೂ ಧರ್ಮದ ಸಂರಕ್ಷಕರು ಎಂದು ಹೇಳಿಕೊಳ್ಳುವ ಸಂಘ ಪರಿವಾರದವರು ಈ ಪ್ರಕರಣದ ಬಗ್ಗೆ ಮೌನವಾಗಿರುವುದು ಅದರಲ್ಲೂ ಬಿಜೆಪಿಯಲ್ಲಿರುವ ನಾಯಕರ ಬಾಯಿ ಕಟ್ಟಿಹಾಕಿರುವುದು ಏಕೆ ಎಂದು ಪ್ರಶ್ನಿಸಿದರು.

ಶಾಸಕ ಮುನಿರತ್ನ ಕಾನೂನು ಮಾಡುವ ಶಾಸಕರು. ಅವರೇ ನಿಯಮವನ್ನು ಉಲ್ಲಂಘಿಸಿರುವುದು ಸರಿಯಲ್ಲ ಎಂದು ಹೇಳಿದರು.ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ. ಪ್ರಧಾನಮಂತ್ರಿಯವರು ಸೀಮಿತ ಅಲ್ಲ. ಎಲ್ಲಾ ಧರ್ಮೀಯರಿಗೂ ಸೇರಿದ್ದಾರೆ. ನಾಗಮಂಗಲದಲ್ಲಿ ಘಟನೆಗೆ ಸಂಬಂಧಪಟ್ಟಂತೆ ಆಯ್ಕೆಯ ಮಾದರಿಯಲ್ಲಿ ವಿಚಾರ ಪ್ರಸ್ತಾಪಿಸುವುದು ಸರಿಯಲ್ಲ ಎಂದರು.

RELATED ARTICLES

Latest News