Friday, November 22, 2024
Homeರಾಜ್ಯದರ್ಶನ್‌ ಹಾಗೂ ಅವರ ಸಿನಿಮಾಗಳನ್ನು ಬ್ಯಾನ್‌ ಮಾಡಬೇಕು : ಎಟಿಆರ್‌ ಆಗ್ರಹ

ದರ್ಶನ್‌ ಹಾಗೂ ಅವರ ಸಿನಿಮಾಗಳನ್ನು ಬ್ಯಾನ್‌ ಮಾಡಬೇಕು : ಎಟಿಆರ್‌ ಆಗ್ರಹ

ಹಾಸನ,ಜೂನ್‌.14- ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಯಾಗಿರುವ ನಟ ದರ್ಶನ್‌ ಸಿನಿಮಾಗಳನ್ನು ಬ್ಯಾನ್‌ ಮಾಡಬೇಕು ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉರಿದವರು ಬೂದಿ ಆಗಲೇಬೇಕು ಉರಿದವರು ಒಂದಲ್ಲ ಒಂದು ದಿನ ನಾಶ ಆಗುತ್ತಾರೆ ಎನ್ನುವುದಕ್ಕೆ ನಟ ದರ್ಶನ್‌ ಸ್ಪಷ್ಟ ಉದಾಹರಣೆಯಾಗಿದ್ದಾರೆ.ಇವರನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹೊರದಬ್ಬ ಬೇಕು ಹಾಗೂ ಇವರ ಸಿನಿಮಾಗಳನ್ನು ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸಿದರು .

ನಟ ದರ್ಶನ್‌ ಮಾಡಿರುವ ಘನ ಘೋರ ಅಪರಾಧಗಳನ್ನು ನಾವೆಲ್ಲರೂ ಖಂಡಿಸಲೇಬೇಕು, ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಸಿನಿಮಾ ಶೈಲಿಯಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ್ದಾರೆ. ಓರ್ವ ನಟನಾದವನು ನಾಡಿನ ಕಲೆ ಸಂಸ್ಕೃತಿ ಸಂಪ್ರದಾಯವನ್ನು ಎತ್ತಿ ಹಿಡಿಯಬೇಕಿತ್ತು, ಆದರೆ ಮೇರು ನಟ ಎಂದು ಹೆಸರು ಪಡೆದಿದ್ದ ದರ್ಶನ್‌ ಹಾಗೂ ಅವರ ಪಟಾಲಂಗಳು ಹತ್ಯೆ ಮಾಡಿರುವುದು ನೋಡಿ ಧಿಗ್ಭ್ರಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು .

ಇಂತಹ ವ್ಯಯಕ್ತಿಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಹಣ ಹೆಸರು ಬೆಳೆಸಿ ಇಂತಹ ಹೇಯ ಕೃತ್ಯವನ್ನು ಮಾಡಿರುವುದು ನಾಡಿಗೆ ಅಗೌರವ ತಂದಂತಾಗಿದೆ. ಹಿಂದೆ ಆರೋಪಿಗಳು ಹಣದಿಂದ ಇಂತಹ ಪ್ರಕರಣಗಳಲ್ಲಿ ಕುಲಾಸಿಯಾಗಿದ್ದಾರೆ. ಇದು ಕಾನೂನಿನ ದೌರ್ಬಲ್ಯವೋ? ಎನ್ನುವುದು ತಿಳಿಯುತ್ತಿಲ್ಲ .ಆದರೆ ಈಗ ರಣರೋಚಕ ದುರ್ಘಟನೆ ನಡೆದಿದ್ದು, ಪೊಲೀಸ್‌‍ ಇಲಾಖೆ ದರ್ಶನ್‌ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಿಂದೆ ಹಲವು ದೇಶದ್ರೋಹಿ ಕೋಟಾ ನೋಟು ಮುದ್ರಣ ದಂತಹ ಪ್ರಕರಣಗಳಲ್ಲೂ ಖುಲಾಸೆಯಾಗಿರುವ ಸನ್ನಿವೇಶನಗಳನ್ನು ಕಂಡಿದ್ದೇವೆ ಸರ್ಕಾರ ಮತ್ತು ಇಲಾಖೆಗಳು ಕಾನೂನು ಕ್ರಮದ ಜೊತೆಗೆ ಎಷ್ಟು ಜನಕ್ಕೆ ಶಿಕ್ಷೆಯಾಯಿತು ಎನ್ನುವುದನ್ನು ಗಮನಿಸಬೇಕು. ಈ ರೀತಿಯ ಪ್ರಕರಣಗಳಲ್ಲಿ ಶೀಘ್ರ ಶಿಕ್ಷೆಯಾದರೆ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಯಾಗುತ್ತದೆ ಎಂದರು.
ರೇಣುಕಸ್ವಾಮಿ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಅನ್ನು ತೆರೆಯುವ ಮೂಲಕ ಕನಿಷ್ಠ ಮೂರು ತಿಂಗಳಲ್ಲಿ ದರ್ಶನ್‌ ಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ವಾಲ್ಮೀಕಿ ನಿಗಮದ ಹಣ ಲೂಟಿಕೋರರ ಪಾಲಾಗಿದ್ದು ಇದರ ಹಿಂದೆ ದೊಡ್ಡ ಶಕ್ತಿಯೇ ಅಡಗಿದ್ದು ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಮಸ್ವಾಮಿ ಒತ್ತಾಯಿಸಿದರು .ಈ ಹಿಂದೆಯೂ ಹಲವಾರು ನಿಗಮ ಮಂಡಳಿಗಳಲ್ಲಿ ಅವ್‌ಯವಹಾರ ನಡೆದಿದೆ. ಆಡಳಿತ ನಡೆಸುವವರು ಬಾಯಲ್ಲಿ ಮಾತ್ರ ಪಾರದರ್ಶಕತೆ ಆಡಳಿತ ನೀಡುವುದಾಗಿ ಹೇಳುತ್ತಾರೆ. ಆದರೆ ಅಂತಹ ಆಡಳಿತ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳ್ಳೆಯ ಬೆಳೆ ಬರಲು ಕಳೆ ಕೀಳಬೇಕು ಅಂತಯೇ ಉತ್ತಮ ಆಡಳಿತಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಆಗಲೇಬೇಕು ಇದು ದೊಡ್ಡ ಹಗರಣವಾಗಿದ್ದು ಸಣ್ಣವರಿಂದ ಅಪರಾಧ ನಡೆದಿಲ್ಲ, ದೊಡ್ಡವರೆ ಇಂತಹ ಕೃತ್ಯ ಮಾಡಿದ್ದಾರೆ ಎಂದರು. ಸರ್ಕಾರಕ್ಕೆ ಬದ್ಧತೆ ಇದ್ದರೆ ಇಂತಹ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಈ ಮೂಲಕ ಜನರಿಗೆ ದೊಡ್ಡ ಸಂದೇಶವನ್ನು ಸಾರಬೇಕಿದೆ. ಇಂತಹ ಭ್ರಷ್ಟಾಚಾರ ಬೆಳೆಯಲು ಬಿಡದೆ ನಿಯಂತ್ರಣ ಮಾಡಬೇಕಿದ್ದು ತುರ್ತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರ ಆಸ್ತಿ ಹಣ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್‌ಯವಾಗಿದೆ. ಆದರೆ ಈ ನಿಟ್ಟಿನಲ್ಲಿ ಕಠಿಣ ಕ್ರಮಗಳು ಜರುಗುತ್ತಿರುವುದು ಕಡಿಮೆಯಾಗಿದೆ, ಎಂಜಲು ತಿಂದವರು ಆರೋಗ್ಯವಾಗಿರಲು ಸಾಧ್ಯವಿಲ್ಲ ಇಂತಹ ಪ್ರಕರಣದಲ್ಲಿ ಸಿಲುಕಿರುವವರು ಹೆಚ್ಚು ದಿನ ಕಾನೂನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜನಾರ್ಧನ್‌‍, ಮಾದೇಶ್‌‍, ಲೋಕೇಶ್‌ ಇದ್ದರು.

RELATED ARTICLES

Latest News