Saturday, September 14, 2024
Homeರಾಜ್ಯಸಿದ್ದಗಂಗಾ ಮಠಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಬೇಟಿ

ಸಿದ್ದಗಂಗಾ ಮಠಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಬೇಟಿ

ತುಮಕೂರು,ಜೂನ್‌.14-ಕೇಂದ್ರ ಸಚಿವರಾದ ನಂತರ ಸೋಮಣ್ಣನವರು ಮೊಟ್ಟಮೊದಲ ಇಂದು ಬೆಳಿಗ್ಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ತಮ್ಮ ಆರಾಧ್ಯ ದೈವ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮಿಯವರ ಆಶೀರ್ವಾದ ಪಡೆದರು.

ನಂತರ ಎಲೆರಾಂಪುರ ಮಠ, ಸಿದ್ದರಬೆಟ್ಟದ ಮಠ, ಬೆಳ್ಳಾವಿ ಕಾರದೇಶ್ವರ ಮಠ, ಗೋಡೆಕೆರೆ ಮಠ, ತಿಪಟೂರು ಮಠ, ರಂಗಾಪುರ ಮಠ, ನೊಣವಿನಕೆರೆ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಶ್ರೀಗಳ ಆಶೀರ್ವಾದ ಪಡೆಯುವರು .

ಮಾಜಿ ಸಂಸದ ಜಿ ಎಸ್‌‍ ಬಸವರಾಜು, ಶಾಸಕ ಜ್ಯೋತಿಗಣೇಶ್‌ ,ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್‌ ಹೆಬ್ಬಾಕ . ಜಿಲ್ಲಾ ಜೆಡಿಎಸ್‌‍ ಅಧ್ಯಕ್ಷ ಆರ್‌.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಉಪಾಧ್ಯಕ್ಷರಾದ ನಾಗರತ್ನಮ್ಮ, ಅನಿತಾ, ಕಾರ್ಯದರ್ಶಿಗಳಾದ ಕೆಂಪೇಗೌಡ, ಜ್ಯೋತಿ ತಿಪ್ಪೇಸ್ವಾಮಿ, ಜೆಡಿಎಸ್‌‍ ನಗರಾಧ್ಯಕ್ಷ ವಿಜಯ್‌ಗೌಡ, ವಕ್ತಾರ ಮಧು, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್‌ ಜೆ.ಜಗದೀಶ್‌ ಹಾಜರಿದ್ದರು.

ಭಾನುವಾರ ಜೂನ್‌.16)ರಂದು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವ ಸೋಮಣ್ಣ ಅವರು ಲೋಕಸಭಾಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕರಿಸಿದ ಮತದಾರರಿಗೆ ಹಾಗೂ ಬೆಜೆಪಿ ಹಾಗು ಜೆಡಿಎಸ್‌‍ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಹಿದೆ.

ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್‌‍ನಿಂದ ವಿ.ಸೋಮಣ್ಣ ಅವರನ್ನು ಅಭಿನಂದಿಸಲಾಗುವುದು ಕಾರ್ಯಕ್ರಮಕ್ಕೆ ಮುನ್ನಾ ನಗರದ ಎಸ್‌‍ಐಟಿ ಬ್ಯಾಕ್‌ ಗೇಟ್‌ ಬಳಿಯಿಂದ ಸೋಮಣ್ಣ ಅವರನ್ನು ಅದ್ದೂರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು, ಎರಡೂ ಪಕ್ಷಗಳ ಕಾರ್ಯಕರ್ತರ ಬೃಹತ್‌ ಬೈಕ್‌ ಕ್ಯಾಲಿ, ಜನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಸಚಿವರನ್ನು ಬರಮಾಡಿಕೊಳ್ಳಲು ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News