ಬೆಂಗಳೂರು,ಮಾ.12- ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ಅವನು ಯಾವಾಗಲೂ ನನ್ನ ಮಗ ಎಂದಿದ್ದರು. ಈಗ ಡೆವಿಲ್ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲೇ ಆಪ್ತರಿಗೆ ಇನ್‌ಸ್ಟಾದಿಂದ ದರ್ಶನ್ ಕೊಕ್ ಕೊಟ್ಟಿದ್ದಾರೆ.
ದರ್ಶನ್ ಅನ್‌ಫಾಲೋ ಮಾಡಿದ ವಿಚಾರ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಸುಮಲತಾ ಅವರು ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಂಗ್ಲಿಷ್ ಲೈನ್‌ಗಳನ್ನು ಅವರು ಇನ್‌ಸ್ಟಾಗ್ರಾಮ್‌ಸ್ಟೇಟಸ್‌ಗೆ ಪೋಸ್ಟ್ ಮಾಡಿದ್ದಾರೆ. ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತದೆ ಎಂದರೆ ಯಾರು ಸತ್ಯವನ್ನು ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದಾಗ್ಯೂ ಅವರು ತಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ ಎಂದು ಸುಮಲತಾ ಬರೆದುಕೊಂಡಿದ್ದಾರೆ.
ನಟ ದರ್ಶನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಆದರೆ, ಈಗ ಅವರು ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಅವರು ಯಾರನ್ನೂ ಫಾಲೋ ಮಾಡದೇ ಇರೋದು ಹಲವು ಪ್ರಶ್ನೆ ಹುಟ್ಟಿ ಹಾಕಿದೆ. ಫಾಲೋ ಮಾಡುವವರ ಸಂಖ್ಯೆ 0 ಆಗಿದೆ.
ಆದರೆ, ದರ್ಶನ್ ಜೈಲಿನಲ್ಲಿ ಇದ್ದಾಗ ಸುಮಲತಾ ಅವರನ್ನು ನೋಡಲು ಹೋಗಿಲ್ಲ. ರಾಜಕೀಯ ಕಾರಣಗಳಿಂದ ಅವರು ಹೀಗೆ ಮಾಡದೆ ಇರಬಹುದು. ಇದು ದರ್ಶನ್ ಮನಸ್ಸಿಗೆ ನಾಟಿದೆಯೇ ಎನ್ನುವ ಪ್ರಶ್ನೆ ಉಂಟುಮಾಡಿದೆ. ಸುಮಲತಾ ತಮನ್ನು ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ವೈಮನಸು ಮೂಡಿತೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಇಂಥ ನಿರ್ಧಾರಕ್ಕೆ ಕಾರಣ ಏನು ಅಂತ ದರ್ಶನ್ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ದರ್ಶನ್ ಪತ್ನಿಯನ್ನು ಇನ್‌ಸ್ಟಾದಲ್ಲಿ ಈ ಹಿಂದೆಯೇ ಫಾಲೋ ಮಾಡುತ್ತಿರಲಿಲ್ಲ. ಇದು ತಿಳಿಯುತ್ತಿದ್ದಂತೆ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಮದರ್ ಇಂಡಿಯಾ ಎಂದು ಮನಸಾರೆ ಅಮ ಅಂತಿದ್ದ ಸುಮಲತಾ ಅಂಬರೀಶ್ ಅವರನ್ನು ದರ್ಶನ್ ಯಾಕೆ ಅನ್‌ಫಾಲೋ ಮಾಡಿದ್ರು? ತಮ ಅಂತ ಓಡಾಡ್ತಿದ್ದ ಅಭಿಷೇಕ್‌ನನ್ನೂ ಅನ್‌ಫಾಲೋ ಮಾಡಿದ್ಯಾಕೆ ಎಂಬ ಚರ್ಚೆ ಶುರುವಾಗಿದೆ.
ಸುಮಲತಾ ಅಂಬರೀಶ್ ಅವರು ಮೂರು ಇನ್‌ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿರುವುದು ಇನ್ನಷ್ಟು ಅಚ್ಚರಿ ಮೂಡಿಸಿದೆ. ಸತ್ಯವನ್ನು ತಿರುಚುವವರಿಗೆ, ಜನರನ್ನು ನೋಯಿಸುವವರಿಗೆ, ಆರೋಪದ ಹೊಣೆ ಹೊರಿಸುವವರಿಗೆ, ಕೊನೆಗೂ ತಮನ್ನು ತಾವು ಹೀರೋ ಎಂದು ತೋರಿಸಿಕೊಳ್ಳುವವರಿಗೆ ಆಸ್ಕರ್ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಹೋಗುತ್ತದೆ ಎಂದು ಅವರು ಬರೆದಿದ್ದಾರೆ.
ಸುಮಲತಾ ಅವರು ಇನ್ನೊಂದು ಚಂದದ ಪೋಸ್ಟ್ ಕೂಡಾ ಶೇರ್ ಮಾಡಿದ್ದಾರೆ. ಅದರಲ್ಲಿ ಈ ಜಗತ್ತಿನಲ್ಲಿ ತುಂಬಾ ಸುಂದರವಾದ ಸಂಗತಿಗಳಿವೆ. ನಿಮ ಮನಸು, ಆತ ಆ ಸುಂದರ ಸಂಗತಿಗಳಲ್ಲಿ ಒಂದಾಗಿರಲಿ ಎಂದು ಬರೆದಿದ್ದಾರೆ. ಇದರಲ್ಲಿ ಹಕ್ಕಿಯೊಂದು ಮಕರಂದ ಹೀರುವ ವಿಡಿಯೋ ಇದೆ.
ಸುಮಲತಾ ಅವರು ಇನ್ನೊಂದು ಲೈಟ್ ಬೆಳಗುವ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಸರಿ ತಪ್ಪುಗಳ ನಡುವೆ ಕರುಣೆ ತೋರಿಸುವುದು ತುಂಬಾ ಮುಖ್ಯವಾಗಿದೆ. ತುಂಬಾ ಸಲ ಮಾತನಾಡುವಾಗ ಸೆಬ್ರಿಲಿಯೆಂಟ್ ಮೈಂಡ್ ಅಲ್ಲ ಕೇಳಿಸಿಕೊಳ್ಳುವ ವಿಶೇಷವಾದ ಮನಸು ಮುಖ್ಯ ಎಂದು ಪೋಸ್ಟ್ ಹಾಕಿದ್ದಾರೆ.
ಆದರೀಗ ದರ್ಶನ್ ಯಾರೊಬ್ಬರನ್ನೂ ಫಾಲೋ ಮಾಡಿಲ್ಲ. ಮೊದಲೆಲ್ಲಾ ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಆಕ್ಟೀವ್ ಆಗಿ ಇರುತ್ತಿದ್ದ ನಟ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿ ಇದ್ದಾರೆ. ಫ್ಯಾನ್‌್ಸ ಕುರಿತಾಗಿ ಪೋಸ್ಟ್ ಕೂಡ ಹಾಕುತ್ತಾರೆ.
ವಿಜಯಲಕ್ಷಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಫೋಟೊ, ಮೀಡಿಯೋ, ಸ್ಟೋರಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಜಯಲಕ್ಷಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಮೊದಲಿಂದಲೂ ಫಾಲೋ ಮಾಡುತ್ತಿಲ್ಲ.
ಸದ್ಯ ದರ್ಶನ್ ಪತ್ನಿ ಯಾರೊಬ್ಬರನ್ನೂ ಕೂಡಾ ಫಾಲೋ ಮಾಡ್ತಿಲ್ಲ. ತಮ ಮಗ ವಿನೀಶ್‌ನನ್ನು ಕೂಡಾ ಅನ್‌ಫಾಲೋ ಮಾಡಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿರುವ ಸಂಗತಿ. ಅವರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗ್ತಿದ್ದಂತೆ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಜಯಲಕ್ಷಿ ದರ್ಶನ್ ಅವರು ಗಂಡ ಮಗ ಸೇರಿ ಎಲ್ಲರನ್ನೂ ಅನ್‌ಫಾಲೋ ಮಾಡಿದ ಕಾರಣ ಇನ್ನೂ ರೀಲ್ ಆಗಿಲ್ಲ. ಆದರೆ ಎಲ್ಲವೂ ಸರಿಯಾಗ್ತಿದೆ ಎನ್ನುವಾಗಲೇ ವಿಜಯಲಕ್ಷಿ ಯಾಕೆ ಹೀಗೆ ಮಾಡಿದರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅದರ ಕಾರಣದ ಬಗ್ಗೆ ಚರ್ಚೆ ಜೋರಾಗಿದೆ.