Friday, October 11, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruದಸರಾ ಆನೆಗಳಿಗೆ ಕುಶಾಲತೋಪು ತಾಲೀಮು

ದಸರಾ ಆನೆಗಳಿಗೆ ಕುಶಾಲತೋಪು ತಾಲೀಮು

Dasara elephants familiarised with cannon fire shots

ಮೈಸೂರು,ಸೆ.27– ದಸರಾ ಅಂಗವಾಗಿ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ದಸರಾ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ಅಭ್ಯಾಸ ನಡೆಸಲಾಯಿತು. ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆಗೆ 21 ಕುಶಾಲತೋಪು ಹಾರಿಸುವ ಮೂಲಕ ಅಭ್ಯಾಸ ನಡೆಸಲಾಯಿತು.

ಮೈಸೂರು ದಸರಾದ ಆಕರ್ಷಣೀಯ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಹಾರಿಸಲಾಗುತ್ತದೆ. ಆನೆಗಳು, ಕುದುರೆಗಳು ಈ ವೇಳೆ ಹೆದರಬಾರದು ಎಂಬ ಹಿನ್ನೆಲೆಯಲ್ಲಿ ಕುಶಾಲತೋಪು ಅಭ್ಯಾಸ ನಡೆಸಲಾಯಿತು.

ಮೊದಲ ಸುತ್ತಿನ ಕುಶಾಲತೋಪು ಅಭ್ಯಾಸ ನಡೆಸಲಾಗಿದೆ. ಇನ್ನು ಎರಡು ಬಾರಿ ಸೆ.29 ಹಾಗೂ ಅ.1ರಂದು ಕುಶಾಲ ತೋಪು ಅಭ್ಯಾಸ ನಡೆಸಲಾಗುವುದು.

RELATED ARTICLES

Latest News