Monday, November 3, 2025
Homeರಾಜಕೀಯ | Politicsಕಳಂಕಿತ ಸಿಎಂ ದಸರಾ ಉದ್ಘಾಟಿಸಿದ್ದು ನಾಡಿಗೆ ಅಪಕೀರ್ತಿ : ಜೆಡಿಎಸ್‌‍

ಕಳಂಕಿತ ಸಿಎಂ ದಸರಾ ಉದ್ಘಾಟಿಸಿದ್ದು ನಾಡಿಗೆ ಅಪಕೀರ್ತಿ : ಜೆಡಿಎಸ್‌‍

Dasara inaugurated by CM is dishonor

ಬೆಂಗಳೂರು,ಅ.4- ಮುಡಾ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಹಿನ್ನಲೆಯ ಭವ್ಯ ಪರಂಪರೆಯ ಮೈಸೂರು ದಸರಾ ಉದ್ಘಾಟಿಸಿದ್ದು, ನಾಡಿಗೆ ಕಪ್ಪುಚುಕ್ಕೆ ಎಂದು ಜೆಡಿಎಸ್‌‍ ಆರೋಪ ಮಾಡಿದೆ.

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍ ಕಳಂಕಿತ ಮುಖ್ಯಮಂತ್ರಿ ಹಣೆಪಟ್ಟಿ ಹೊತ್ತಿರುವ ನೀವು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರೆ ನಾಡಿಗೆ ಅಪಕೀರ್ತಿ ಎಂದು ಹೇಳಿದೆ.

ಕುಡಿದು ಬಂದು ಕಿರಿಕ್, ಬಿಹಾರಿ ಯುವಕನ ಕತ್ತು ಹಿಸುಕಿ ಕೊಲೆ
- Advertisement -

ಹಲವು ಹಗರಣಗಳಲ್ಲಿ ಮುಳುಗಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯನವರು ಕರುನಾಡ ಜನರ ಆತಸಾಕ್ಷಿಗೆ ದ್ರೋಹ ಬಗೆಯಬಾರದು. ಅಶುದ್ಧ ಕೈಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಮಾಡಿದ್ದು ಸರಿಯೇ ಎಂದು ಜೆಡಿಎಸ್‌‍ ಪ್ರಶ್ನಿಸಿದೆ.

- Advertisement -
RELATED ARTICLES

Latest News