Tuesday, May 28, 2024
Homeರಾಷ್ಟ್ರೀಯಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆ

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆ

ನಾಗ್ಪುರ,ಮಾ.17- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಆಗಿ ಮುಂದಿನ 3 ವರ್ಷಗಳವರೆಗೆ ಕರ್ನಾಟಕದ ಮೂಲದವರಾದ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆಗೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಾರತೀಯ ಪ್ರತಿನಿಧಿ ಸಭೆ ಕಳೆದ ಶುಕ್ರವಾರದಿಂದ ಆರಂಭವಾಗಿ ಮೂರು ದಿನಗಳ ಕಾಲ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ.

ಸಭೆಯಲ್ಲಿ 2024 ರಿಂದ 2027 ರವರೆಗೆ ಆರ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರ್ ಆಯ್ಕೆ ಮಾಡಲಾಗುವುದು. 2021 ರಿಂದಲೂ ಸರಕಾರ್ಯವಾಹ ಆಗಿ ಕೆಲಸ ಮಾಡುತ್ತಿರುವ ಹೊಸಬಾಳೆ ಮತ್ತೊಂದು ಅವಗೆ ಮರು ಆಯ್ಕೆಯಾಗಿದ್ದಾರೆ.

ಭಾರತೀಯ ಪ್ರತಿನಿಧಿ ಸಭೆಯಲ್ಲಿ ದೇಶಾದ್ಯಂತ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಮತ್ತು ಆರ್‍ಎಸ್‍ಎಸ್‍ನ ಮಾನ್ಯತೆ ಪಡೆದ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

RELATED ARTICLES

Latest News