Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿ | Belagaviಮದುವೆಗೆ ಒಂದು ದಿನ ಇರುವಾಗಲೇ ಹೃದಯಾಘಾತದಿಂದ ವರ ನಿಧನ

ಮದುವೆಗೆ ಒಂದು ದಿನ ಇರುವಾಗಲೇ ಹೃದಯಾಘಾತದಿಂದ ವರ ನಿಧನ

day before the wedding, the groom died of a heart attack

ಚಿಕ್ಕೋಡಿ,ಸೆ.4- ಒಟ್ಟಿಗೆ ಸೇರಿದ ಬಂಧು ಬಳಗ, ಎಲ್ಲೆಡೆ ಸಂಭ್ರಮ, ಹರಟೆ, ಯಾಕೋ ಆ ಭಗವಂತನಿಗೆ ಇವರ ಖುಷಿ ನೋಡಿ ಸಹಿಸಲಾಗಲಿಲ್ಲವೇನೋ? ನಾಳೆ ಹಸೆಮಣೆ ಏರಬೇಕಾಗಿದ್ದ ವರನನ್ನೇ ತನ್ನ ಬಳಿ ಕರೆದುಕೊಂಡು ಮದುವೆ ಮನೆಯನ್ನು ಸೂತಕ ಮನೆಯನ್ನಾಗಿಸಿಬಿಟ್ಟಿದ್ದಾನೆ.

ಮದುವೆಗೆ ಒಂದು ದಿನ ಮುನ್ನ ವರ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝಂಜರವಾಡ ಆರ್ಸಿ ಗ್ರಾಮದಲ್ಲಿ ನಡೆದಿದೆ. ಸದಾಶಿವ ರಾಮಪ್ಪ ಹೋಸಲ್ಕಾರ (31) ಮೃತಪಟ್ಟ ವರ.

ನಾಳೆ ಯುವಕನಿಗೆ ಮದುವೆ ನಿಶ್ಚಯವಾಗಿತ್ತು. ಕುಟುಂಬ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಮದುವೆ ಮನೆಯಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ವರನಿಗೆ ಹಠಾತ್ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾನೆ.

ಆತನನ್ನು ಕೂಡಲೇ ಅಥಣಿ ತಾಲ್ಲೂಕಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಯುವಕ ಮೃತಪಟ್ಟಿದ್ದಾನೆ. ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

RELATED ARTICLES

Latest News