Thursday, May 2, 2024
Homeರಾಜ್ಯಶಿವಮೊಗ್ಗ ಗಲಭೆಕೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ : ಡಿಸಿಎಂ

ಶಿವಮೊಗ್ಗ ಗಲಭೆಕೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ : ಡಿಸಿಎಂ

ಬೆಂಗಳೂರು,ಅ.6- ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಕಾನೂನು ಕೈಗೆತ್ತಿಕೊಂಡಿರುವ ಎಲ್ಲರ ವಿರುದ್ಧವೂ ಸರ್ಕಾರ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮ ಜರುಗಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರ ಸತ್ಯ ಶೋಧನಾ ಸಮಿತಿ ಏನು ಬೇಕಾದರೂ ಮಾಡಿಕೊಳ್ಳಲಿ. ಅವರು ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಕಬ್ಬಿಣದಲ್ಲಿ ಎರಡು ಕೆಲಸಗಳನ್ನು ಮಾಡಬಹುದು. ಒಂದು ಸೂಜಿಯನ್ನಾಗಿ ಬದಲಾಯಿಸಿ ಸಮಾಜವನ್ನು ಹೊಲಿಯಬಹುದು. ಮತ್ತೊಂದು ಕತ್ತರಿ ತಯಾರಿಸಿ ಸಮಾಜವನ್ನು ಕತ್ತರಿಸಬಹುದು. ನಾವು ಸೂಜಿಯನ್ನು ತಯಾರಿಸಿ ಸಮಾಜವನ್ನು ಹೊಲೆಯುವ ಕೆಲಸ ಮಾಡುತ್ತಿದ್ದೇವೆ.

ಅವರು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ನಮಗೂ ಮತ್ತು ಬಿಜೆಪಿಯವರಿಗೂ ಇರುವ ವ್ಯತ್ಯಾಸ ಎಂದು ತಿರುಗೇಟು ನೀಡಿದರು.

ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳು ಮತ್ತು ಗುಂಡಾಗಳ ತಾಣವಾಗಿದೆ : ಬಿಜೆಪಿ ವಾಗ್ದಾಳಿ

ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭೇಟಿ ನೀಡಿದ್ದರು. ಅಲ್ಲಿ ಹಿಂದೂ, ಮುಸ್ಲಿಂ ಎಂಬ ಬೇಧವಿಲ್ಲದೆ ಎಲ್ಲಾ ಸಮುದಾಯದವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಸಾಂತ್ವಾನ ಹೇಳಿದ್ದಾರೆ. ಬಿಜೆಪಿಯವರು ಒಂದು ಸಮುದಾಯದವರನ್ನು ಮಾತ್ರ ಭೇಟಿ ಮಾಡಿದ್ದಾರೆ. ಇದರಲ್ಲೇ ಅವರು ಸಮಾಜವನ್ನು ವಿಭಜಿಸುವ ಸಂಚು ಸ್ಪಷ್ಟವಾಗುತ್ತದೆ ಎಂದರು.

ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಇಲ್ಲ. ಕಾನೂನನ್ನು ಕೆಣಕಿದರೆ ಅದರ ಪರಿಣಾಮ ಏನು ಎಂಬುದು ತಪ್ಪಿತಸ್ಥರಿಗೆ ಅರಿವಾಗಲಿದೆ ಎಂದು ಹೇಳಿದರು. ಕಾಂಗ್ರೆಸ್ ಎಸ್.ಎಂ.ಕೃಷ್ಣ ಅವರ ಕಾಲದಲ್ಲೇ ಕುವೆಂಪು ಅವರ ಪದ್ಯ ಬಳಸಿಕೊಂಡು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪರಿಕಲ್ಪನೆಯನ್ನು ಆರಂಭಿಸಿತ್ತು. ನಮ್ಮ ನಾಡಗೀತೆಯಲ್ಲೇ ಸರ್ವ ಜನರನ್ನು ಒಳಗೊಂಡ ಮೂಲ ಉದ್ದೇಶಗಳಿವೆ ಎಂದರು.

RELATED ARTICLES

Latest News