ಬೆಂಗಳೂರು,ಆ.12- ಮಳೆಹಾನಿಯಿಂದ ಸಂಕಷ್ಟಕ್ಕೊಳಗಾದ ಪ್ರದೇಶಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಜಿಕೆವಿಕೆಯಲ್ಲಿ ನಡೆದ ಮಾನವ ಹಾಗೂ ಆನೆ ಸಂಘರ್ಷ ನಿರ್ವಹಣೆಯ ಅಂತಾರಾಷ್ಟ್ರೀಯ ಸಮಾವೇಶದ ಬಳಿಕ ನೇರವಾಗಿ ಡಿ.ಕೆ.ಶಿವಕುಮಾರ್ ಮಳೆಬಾಧಿತ ಪ್ರದೇಶಗಳತ್ತ ಮುಖ ಮಾಡಿದ್ದರು.
ಹೆಬ್ಬಾಳದ ಮೇಲ್ಸೇತುವೆ ಪರಿಶೀಲನೆ ನಡೆಸಿ ಅಲ್ಲಿ ಬಿಡಿಎ ಹಾಗೂ ಬಿಎಂಆರ್ಸಿಎಲ್ ಕಾಮಗಾರಿ ಪ್ರದೇಶಗಳಿಗೆ ನೀರು ನುಗ್ಗಿರುವುದನ್ನು ಪರಿಶೀಲಿಸಿದರು. ಅನಂತರ ಎಚ್ಬಿಆರ್ ಲೇಔಟ್ನ 5ನೇ ಬ್ಲಾಕ್ನಲ್ಲಿ ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿರುವುದು ಹಾಗೂ ಮಳೆಯಿಂದಾಗಿರುವ ಹಾನಿಯನ್ನು ಪರಿಶೀಲಿಸಿದರು.
ಬಾಣಸವಾಡಿ, ಸಿಲ್‌್ಕಬೋರ್ಡ್ ಜಂಕ್ಷನ್, ಜಯದೇವ ಜಂಕ್ಷನ್ನಲ್ಲಿ ಮೆಟ್ರೋ ಕಾಮಗಾರಿಯಿಂದಾಗಿರುವ ಹಾನಿಗಳು ಮತ್ತು ಮಳೆಬಾಧಿತ ಪ್ರದೇಶಗಳ ಪರಿಶೀಲನೆ ಬಳಿಕ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಮಾರುತಿ ಸೇವಾ ನಗರಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿದರು.