Sunday, September 15, 2024
Homeಇದೀಗ ಬಂದ ಸುದ್ದಿಟಿಬಿ ಡ್ಯಾಮ್ ಡ್ಯಾಮೇಜ್ : ನಿನ್ನೆಯಿಂದ ಇಲ್ಲಿಯವರೆಗೆ 13 ಟಿಎಂಸಿ ನೀರು ಖಾಲಿ

ಟಿಬಿ ಡ್ಯಾಮ್ ಡ್ಯಾಮೇಜ್ : ನಿನ್ನೆಯಿಂದ ಇಲ್ಲಿಯವರೆಗೆ 13 ಟಿಎಂಸಿ ನೀರು ಖಾಲಿ

ಕೊಪ್ಪಳ,ಆ.12-ಜಿಲ್ಲೆಯ ಮುನಿರಾಬಾದ್ ಸಮೀಪ ಇರುವ ತುಂಗಾಭದ್ರಾ ಜಲಾಶಯದ ಬಳಿಯಿರುವ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ನಿನ್ನೆಯಿಂದ ಇಲ್ಲಿಯವರೆಗೆ 13 ಟಿಎಂಸಿ ನೀರು ಡ್ಯಾಂನಿಂದ ಹರಿದು ಹೋಗಿದೆ.

ಡ್ಯಾಂನಿಂದ ಇಂದು ಕೂಡ ನದಿಗೆ 1.5 ಲಕ್ಷ ಕ್ಯೂಸೆಕ್‌್ಸ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

ಕ್ರಸ್ಟ್ಗೇಟ್ ದುರಸ್ತಿ ಮಾಡಲು ಜಲಾಶಯದಲ್ಲಿರುವ ನೀರನ್ನು ಹಂತವಾಗಿ ಹಂತವಾಗಿ ಖಾಲಿ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ. ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದ ಜನ ಸುರಕ್ಷಿತವಾಗಿರುವಂತೆ ಡಂಗೂರ ಸಾರಿ ಎಚ್ಚರಿಕೆ ನೀಡಲಾಗುತ್ತಿದೆ.

ಯಾವುದೇ ಕಾರಣಕ್ಕೂ ನದಿ ಇಳಿಯದಂತೆ, ಮೀನುಗಾರಿಕೆ ಮಾಡದಂತೆ, ನದಿ ಸಮೀಪ ಮಕ್ಕಳನ್ನು ಕಳುಹಿಸದಂತೆ ಜಾನುವಾರುಗಳು ಹೋಗದಂತೆ ಎಚ್ಚರ ವಹಿಸಿ ಎಂದು ಸೂಚನೆ ನೀಡಲಾಗಿದೆ. ಟಿಬಿ ಡ್ಯಾಂ ಕೆಳಭಾಗದ ಕೊಪ್ಪಳ ತಾಲ್ಲೂಕು, ಗಂಗಾವತಿ ತಾಲ್ಲೂಕು, ಕಾರಟಗಿ ತಾಲ್ಲೂಕಿನ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

ಸಂಚಾರ ನಿಷೇಧ
ಡ್ಯಾಂ ಸುತ್ತಮುತ್ತಲಿನ ಪ್ರದೇಶಕ್ಕೆ ಸಂಚಾರ ನಿಷೇಧ ಮಾಡಲಾಗಿದೆ. ತುಂಗಾಭದ್ರಾ ಸೇತುವೆ ನೋಡಲು ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಜನ ಬರುತ್ತಾರೆ. ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆಯುತ್ತಾರೆ. ಭಾರಿ ಪ್ರಮಾಣದಲ್ಲಿ ನೀಡನ್ನು ಹೊರಬಡುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ಸುತ್ತಮುತ್ತ ಸಂಚಾರ ನಿಷೇಧ ವಿಧಿಸಲಾಗಿದೆ.

RELATED ARTICLES

Latest News