Monday, May 19, 2025
Homeಬೆಂಗಳೂರುಕುಖ್ಯಾತ ರೌಡಿ ಹೂ ಮಂಜನ ಮೇಲೆ ಎದುರಾಳಿ ಗ್ಯಾಂಗ್‌ ಮಾರಣಾಂತಿಕ ಹಲ್ಲೆ

ಕುಖ್ಯಾತ ರೌಡಿ ಹೂ ಮಂಜನ ಮೇಲೆ ಎದುರಾಳಿ ಗ್ಯಾಂಗ್‌ ಮಾರಣಾಂತಿಕ ಹಲ್ಲೆ

ಬೆಂಗಳೂರು,ಆ.23-ಕುಖ್ಯಾತ ರೌಡಿ ಮಂಜುನಾಥ್‌ ಅಲಿಯಾಸ್‌‍ ಹೂ ಮಂಜನ ಮೇಲೆ ಎದುರಾಳಿ ಗ್ಯಾಂಗ್‌ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿಯಲಹಂಕ ಉಪನಗರ ಪೊಲೀಸ್‌‍ ಠಾಣೆಯಲ್ಲಿ ನಡೆದಿದೆ.ರೌಡಿ ಹೂ ಮಂಜ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಆತನ ಸ್ಥಿತಿ ಗಂಭೀರವಾಗಿದೆ.

ಯಲಹಂಕ ನ್ಯೂಟೌನ್‌ ಬಳಿ ರೌಡಿ ಹೂ ಮಂಜ ನ ಹಾಡುಹಗಲೇ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿ ಎದುರಾಳಿ ಗ್ಯಾಂಗ್‌ ಪರಾರಿಯಾಗಿದೆ. ದುಷ್ಕರ್ಮಿಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಯತ್ನಿಸಿದಾಗ ಕುಸಿದು ಬಿದ್ದ ಹೂ ಮಂಜ ಸಾವನ್ನಪ್ಪಿದ್ದಾನೆ ಎಂದು ತಿಳಿದು ಆರೋಪಿಗಳು ಪರಾರಿಯಾಗಿದ್ದರು. ಆದರೆ ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿನ್ನೆಯಷ್ಟೆ ಕೊಡಿಗೇಹಳ್ಳಿಯಲ್ಲಿ ವಿಜಯ್‌ ಎಂಬ ರೌಡಿ ಮೇಲೆ ಕೊಲೆ ಯತ್ನ ನಡೆದಿತ್ತು. ಸದ್ಯ ಯಲಹಂಕ ನ್ಯೂಟೌನ್‌ನಲ್ಲಿ ರೌಡಿ ಕೊಲೆಗೆ ಯತ್ನ ಮಾಡಲಾಗಿದೆ. ಯಲಹಂಕ ನ್ಯೂಟೌನ್‌ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.

ಯುವಕರ ಮೇಲೆ ಹಲ್ಲೆ:
ರಾಮನಗರದ ಐಜೂರು ಸರ್ಕಲ್‌ನಲ್ಲಿ ಯುವಕರು ಲಾಂಗ್‌ ಝಳಪಿಸಿದ ದುಷ್ಕರ್ಮಿಗಳ ಗ್ಯಾಂಗ್‌ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ.

ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅಪ್ರಾಪ್ತರು ಭಾಗಿಯಾಗಿದ್ದಾರೆ.ಯುವತಿಗೆ ಮೆಸೇಜ್‌ ಮಾಡಿದ್ದಕ್ಕೆ ಜಗಳ ಶುರುವಾಗಿದೆ. ಯುವಕರಿಬ್ಬರು ಒಬ್ಬಳನ್ನೇ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನನ್ನ ಹುಡುಗಿಗೆ ಹೇಗೆ ಮೆಸೇಜ್‌ ಮಾಡುತ್ತೀಯಾ ಎಂದು ಎದುರಾಳಿ ಯುವಕನೊಬ್ಬ ಲಾಂಗು ಬೀಸಿ ಹಲ್ಲೆ ನಡೆಸಿದ್ದಾನೆ.

ಇದೇ ಆಗಸ್ಟ್‌ 18ರಂದು ಗಲಾಟೆ ನಡೆದಿದ್ದು, ಯುವಕರ ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಯುವಕರು ಮಚ್ಚು-ಲಾಂಗು ಹಿಡಿದು ಕಿತ್ತಾಡುತ್ತಿರುವುದು ಕಂಡೊಡನೆ ಸ್ಥಳೀಯರು ಬಿಡಿಸಲು ಯತ್ನಿಸಿದ್ದಾರೆ.

RELATED ARTICLES

Latest News