ಮನಿಲಾ,ಅ.1- ಮಧ್ಯರಾತ್ರಿ ಫಿಲಿಪ್ಪೀನ್ಸ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಕಟ್ಟಡಗಳು ಉರುಳಿ ಸುಮಾರು 40 ಜನರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪನದಲ್ಲಿ 6.9 ತೀವ್ರತೆಯ ಕೋಪನವು ಹಲವಾರು ಮನೆಗಳು ಮತ್ತು ಕಟ್ಟಡಗಳಿಗೆ ಧ್ವಂಸಮಾಡಿದೆ. ದೇಶದ ಮಧ್ಯಭಾಗದ ಸೆಬು ಪ್ರಾಂತ್ಯದಲ್ಲಿ ತೀವ್ರ ಕಂಪನದಿಂದಾಗಿ ಮಲಗಿದ್ದ ಜನರು ಕಂಪನದಿಂದ ಬೆಚ್ಚಿಬಿದ್ದಿದ್ದಾರೆ.ವಿದ್ಯುತ್ ಕಡಿತಗೊಂಡ ಕಾರಣ ಜನರು ಕತ್ತಲೆಯಲ್ಲೇ ಜಿಒಈವ ಉಳಿಸಿಕೊಳ್ಳಲು ಪರದಾಡಿದ್ದಾರೆ.
ಭೂ ಭಾಗದ ಐದು ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದೆ. ಸೆಬು ಪ್ರಾಂತ್ಯದಲ್ಲಿ ಸುಮಾರು 90 ಸಾವಿರ ಜನರು ವಾಸಿಸುತ್ತಿದ್ದಾರೆ.ಬೊಗೊದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಇದಲ್ಲದೆ ಭೂಕುಸಿತದಿಂದಾಗಿ ಅನೇಕರು ಅವಶೇಷಗಳಡಿ ಸಿಲುಕಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದು,ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬೊಗೊ ಬಳಿಯ ಮೆಡೆಲಿನ್ ಪಟ್ಟಣದಲ್ಲಿ ಮನೆಗಳ ಛಾವಣಿಗಳು ಮತ್ತು ಗೋಡೆಗಳು ಬಿದ್ದು 12 ಸಾವನ್ನಪ್ಪಿದ್ದಾರೆ. ಕೆಲವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಭೂಕಂಪದ ತೀವ್ರತೆಗೆ ಸಾಕಷ್ಟು ಹಾನಿಯಾಗಿದೆ. ಈ ಪ್ರದೇಶದ ರಸ್ತೆಗಳು ನಾಶವಾಗಿದ್ದು ಸಂಪರ್ಕ ಕಡಿತಗೊಂಡಿದೆ .ನೂರಾರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.