Monday, November 25, 2024
Homeಅಂತಾರಾಷ್ಟ್ರೀಯ | Internationalದಕ್ಷಿಣ ಆಫ್ರಿಕಾದಲ್ಲಿ ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆ

ದಕ್ಷಿಣ ಆಫ್ರಿಕಾದಲ್ಲಿ ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಕೇಪ್‌ ಟೌನ್‌, ಮೇ 14-ಕಳೆಡ ವಾರ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಕಟ್ಟಡ ಕುಸಿದ ಘಟನೆಯಲ್ಲಿ ಸಾವಿನ ಸಂಖ್ಯೆ 32 ಕ್ಕೆ ಏರಿಕೆಯಾಗಿದ್ದು,ಅವಶೇಷಗಳಡಿ ಬದುಕುಳಿದವರನ್ನು ಹುಡುಕುವ ಪ್ರಯತ್ನ ರಕ್ಷಣಾ ತಂಡಗಳು ಮುಂದುವರೆಸಿದೆ.

ದಕ್ಷಿಣ ಆಫ್ರಿಕಾದ ದಕ್ಷಿಣ ಕರಾವಳಿಯ ಜಾರ್ಜ್‌ ನಗರದಲ್ಲಿ ಕಟ್ಟಡದ ಅವಶೇಷಗಳಲ್ಲಿ ಆಹಾರ ಮತ್ತು ನೀರಿಲ್ಲದೆ 6 ದಿನಗಳ ನಂತರ ಕಟ್ಟಡ ಕಾರ್ಮಿಕನೊಬ್ಬನನ್ನು ಅವಶೇಷದಿಂದ ಜೀವಂತವಾಗಿ ಹೊರತೆಗೆಯಲಾಗಿದ್ದು,ಭರವಸೆಯನ್ನು ಹೆಚ್ಚಿಸಿತು ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಇನ್ನೂ 20 ಕಾರ್ಮಿಕರು ಇನ್ನೂ ಕಾಣೆಯಾಗಿದ್ದಾರೆ, ದಕ್ಷಿಣ ಆಫ್ರಿಕಾದ ಮಾರಣಾಂತಿಕ ಕಟ್ಟಡದ ಕುಸಿತದಲ್ಲಿ ಸಾವಿನ ಸಂಖ್ಯೆ ಅಂತಿಮವಾಗಿ 50 ಕ್ಕಿಂತ ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.ಸುಮಾರು 600 ಕ್ಕೂ ಹೆಚ್ಚು ತುರ್ತು ಸೇವೆಗಳು ಮತ್ತು ಇತರ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಟ್ಟಡ ಕುಸಿದಾಗ ಸ್ಥಳದಲ್ಲಿ 81 ಕಾರ್ಮಿಕರಿದ್ದರು ಮತ್ತು 29 ಜನರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ನಗರ ತಿಳಿಸಿದ್ದಾರೆ ಅವರಲ್ಲಿ 12 ಮಂದಿ ಆಸ್ಪತ್ರೆಯಲ್ಲಿ ಬದುಕುಳಿದವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದು ಪ್ರಯತ್ನ ಮುಂದುವರೆದಿದೆ.

32 ವರ್ಷದ ಗೇಬ್ರಿಯಲ್‌ ಗುವಾಂಬೆ ಎಂಬ ಕಾರ್ಮಿಕನನ್ನು ಆಸ್ಪತ್ರೆಯಲ್ಲಿದ್ದು, ಗಮನಾರ್ಹವಾಗಿ ಈತನಿಗೆ ಸಣ್ಣ ಗಾಯಗಳಾಗಿವೆ ಸುಮಾರು 118 ಗಂಟೆಗಳ ಕಾಲ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎಂದು ತಿಳಿಸಲಾಗಿದೆ.

RELATED ARTICLES

Latest News