Thursday, December 5, 2024
Homeರಾಷ್ಟ್ರೀಯ | Nationalಕೇರಳದಲ್ಲಿ ಆಂಬ್ಯುಲೆನ್ಸ್ ಗೆ ಬೆಂಕಿ ತಗುಲಿ ರೋಗಿ ಸಜೀವ ದಹನ

ಕೇರಳದಲ್ಲಿ ಆಂಬ್ಯುಲೆನ್ಸ್ ಗೆ ಬೆಂಕಿ ತಗುಲಿ ರೋಗಿ ಸಜೀವ ದಹನ

ಕೋಝಿಕ್ಕೋಡ್‌ (ಕೇರಳ), ಮೇ 14 -ಇಂದು ಮುಂಜಾನೆ ಆಂಬ್ಯುಲೆನ್ಸ್ ವೊಂದು ಆಸ್ಪತ್ರೆಗೆ ತೆರಳತ್ತಿದ್ದಾಗ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಅದರಲಿದ್ದ ಮಹಿಳಾ ರೋಗಿ ಸುಟ್ಟು ಕರಕಲಾದ ಇಲ್ಲಿ ನಡೆದಿದೆ.

ಮೃತ ರೋಗಿಯಾದ ಸುಲೋಚನಾ (57) ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದಾಗ ಆಘಾತಕಾರಿ ದುರ್ಘಟನೆ ಸಂಭವಿಸಿದೆ.

ಅತಿವೇಗದಿಂದಾಗಿ ಆಂಬ್ಯುಲೆನ್ಸ್ ಚಾಲಕ ನಿಯಂತ್ರಣ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಅದರ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ ಇದರಲ್ಲಿ ಮಹಿಳೆ ರೋಗಿಯು ಮತ್ತು ಇಬ್ಬರು ವ್ಯಕ್ತಿಗಳು, ವೈದ್ಯರು ಮತ್ತು ನರ್ಸ್‌ ಕೂಡ ವಾಹನದಲ್ಲಿದ್ದರು. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ, ಆದರೆ ರೋಗಿಯು ವಾಹನದಲ್ಲಿ ಸಿಕ್ಕಿಹಾಕಿಕೊಂಡು ಸಜೀವ ದಹನವಾಗಿದ್ದಾರೆ.

RELATED ARTICLES

Latest News