Friday, December 13, 2024
Homeರಾಷ್ಟ್ರೀಯ | Nationalಅಸ್ಸಾಂನಲ್ಲಿ ಇಬ್ಬರು ಶಂಕಿತ ಬಾಂಗ್ಲಾದೇಶಿ ಭಯೋತ್ಪಾದಕರ ಬಂಧನ

ಅಸ್ಸಾಂನಲ್ಲಿ ಇಬ್ಬರು ಶಂಕಿತ ಬಾಂಗ್ಲಾದೇಶಿ ಭಯೋತ್ಪಾದಕರ ಬಂಧನ

ಗುವಾಹಟಿ, ಮೇ 14- ಅನ್ಸರುಲ್ಲಾ ಬಾಂಗ್ಲಾ ತಂಡಕ್ಕೆ (ಎಬಿಟಿ) ಸೇರಿದ ಇಬ್ಬರು ಶಂಕಿತ ಬಾಂಗ್ಲಾದೇಶಿ ಭಯೋತ್ಪಾದಕರನ್ನು ಅಸ್ಸಾಂನ ಗುವಾಹಟಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ, ಅಕ್ರಮವಾಗಿ ಭಾರತದಲ್ಲಿ ತಂಗಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಯಿತು, ಅವರು ಭಯೋತ್ಪಾದಕ ಸಂಘಟನೆಗೆ ಸೇರಲು ಯುವಕರನ್ನು ಉತ್ತೇಜಿಸಲು ಇಲ್ಲಿಗೆ ಬಂದಿದ್ದಾರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಇವರು ಬಾಂಗ್ಲಾದೇಶದ ಪ್ರಜೆಗಳು ಎಂದು ಗೊತ್ತಾಗಿದೆ ಅವರು ಪಾಸ್‌‍ಪೋರ್ಟ್‌ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿ ಇಲ್ಲಿ ತಂಗಿದ್ದರು ಮತ್ತು ಅಸ್ಸಾಂನಲ್ಲಿ ಭಯೋತ್ಪಾದನಾ ಜಾಲವನ್ನು ಹರಡಲು ಭಾರತೀಯ ದಾಖಲೆಗಳನ್ನು ಪಡೆಯಲು ಪ್ರಯತ್ನ ಮಾಡಿದ್ದರು.

ಅವರಿಂದ ನಕಲಿ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ಗಳು ಸೇರಿದಂತೆ ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದಿಕಾರಿಗಲು ತಿಳಿಸಿದ್ದಾರೆ.ಘಟನೆಯ ಗಂಬೀರತೆಯನ್ನು ಅರಿತು ಅವರು ಭಾರತದೊಳಗೆ ಹೇಗೆ ಬಂದರು ಮತ್ತು ಯಾರು ಇವರಿಗೆ ನೆರವಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆದಿದೆ.

RELATED ARTICLES

Latest News