Saturday, July 27, 2024
Homeಬೆಂಗಳೂರುಯಶವಂತಪುರ-ಬೆಂಗಳೂರು ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರ ರದ್ದು

ಯಶವಂತಪುರ-ಬೆಂಗಳೂರು ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರ ರದ್ದು

ಹುಬ್ಬಳ್ಳಿ, ಮೇ14- ವಿವಿಧ ಕಾಮಗಾರಿ ಕೈಗೊಳ್ಳುವ ಸಲುವಾಗಿ ಯಶವಂತಪುರ ಹಾಗೂ ಬೆಂಗಳೂರು ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಮೇ 16 ಮತ್ತು 23ರಂದು ಎಸ್‌‍ಎಸ್‌‍ಎಸ್‌‍ ಹುಬ್ಬಳ್ಳಿ-ಕೆಎಸ್‌‍ಆರ್‌ ಬೆಂಗಳೂರು ಡೈಲಿ ಎಕ್‌್ಸಪ್ರೆಸ್‌‍ ರೈಲು (17392) ಕೆಎಸ್‌‍ಆರ್‌ ಬೆಂಗಳೂರು ಬದಲು ಯಶವಂತಪುರದಲ್ಲಿ ತನ್ನ ಸೇವೆ ಕೊನೆಗೊಳಿಸಲಿದೆ.

ಮೇ 17 ಮತ್ತು 24 ರಂದು ಕೆಎಸ್‌‍ಆರ್‌ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (06243) ಕೆಎಸ್‌‍ಆರ್‌ ಬೆಂಗಳೂರಿನ ಬದಲಿಗೆ ಯಶವಂತಪುರ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದೆ.

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಸೋಲಾಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಪ್ಯಾಸೆಂಜರ್‌ ಸ್ಪೆಷಲ್‌ (07331/07332) ರೈಲುಗಳಿಗೆ ವಿಜಯಪುರ ಜಿಲ್ಲೆಯ ಪಡನೂರ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ. ಇದು ಮೂರು ತಿಂಗಳ ಕಾಲ ಅಂದರೆ ಆಗಸ್ಟ್‌ 11ರವರೆಗೆ ಮುಂದುವರಿಯಲಿದೆ.


RELATED ARTICLES

Latest News