ಗಬ್ಬು ನಾರುತ್ತಿರುವ ಯಶವಂತಪುರ ಎಪಿಎಂಸಿ ಮಾರುಕಟ್ಟೆ

ಬೆಂಗಳೂರು, ಜ.11- ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಐಟಿ-ಬಿಟಿ ಎಂದೆಲ್ಲಾ ಹೆಸರು ಪಡೆದು ಜಗತ್ತಿನೆಲ್ಲೆಡೆ ವಿಶೇಷ ಗಮನ ಸೆಳೆದಿರುವ ನಮ್ಮ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಗಬ್ಬು ನಾರುತ್ತಿದೆ. ಎಪಿಎಂಸಿ ಯಾರ್ಡ್ ಕಸದ ರಾಶಿಯಿಂದ ಕೊಳೆತು ರೋಗ-ರುಜಿನಗಳ ತಾಣವಾಗಿ ಪರಿಣಮಿಸಿದೆ. ತಿಂಗಳುಗಳಿಂದ ಕಸ ವಿಲೇವಾರಿ ಮಾಡಿಲ್ಲ, ಹಾಗಾಗಿ ಕಸ ಕೊಳೆತು ಗಬ್ಬು ವಾಸನೆ ಬೀರುತ್ತಿದೆ. ಇಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡೇ ಓಡಾಡುವುದು ಅನಿವಾರ್ಯ ವಾಗಿದೆ. ತರಕಾರಿ ಮಾರುಕಟ್ಟೆ ದಾಸನಪುರಕ್ಕೆ ವರ್ಗಾವಣೆ ಯಾಗಿ ವರ್ಷಗಳು ಕಳೆದರೂ ಇಲ್ಲಿಯೇ ಕೆಲವರು […]