Thursday, July 4, 2024
Homeರಾಷ್ಟ್ರೀಯದೆಹಲಿಯ ಬೇಬಿ ಕೇರ್‌ ಸೆಂಟರ್‌ ಬೆಂಕಿ, 6 ಹಸುಗೂಸುಗಳ ಸಾವು

ದೆಹಲಿಯ ಬೇಬಿ ಕೇರ್‌ ಸೆಂಟರ್‌ ಬೆಂಕಿ, 6 ಹಸುಗೂಸುಗಳ ಸಾವು

ನವದೆಹಲಿ,ಮೇ.26- ರಾಷ್ಟ್ರ ರಾಜಧಾನಿಯ ವಿವೇಕ್‌ ವಿಹಾರ್‌ ಪ್ರದೇಶದಲ್ಲಿನ ಮಕ್ಕಳ ಆಸ್ಪತ್ರೆಯಲ್ಲಿ ತಡ ರಾತ್ರಿ ಭಾರೀ ಬೆಂಕಿ ಅವಘಢ ಸಂಭವಿಸಿ 6 ಹಸುಗೂಸುಗಳು ಸಾವನ್ನಪ್ಪಿವೆ.ರಾತ್ರಿ 11:32ರ ಸುಮಾರಿಗೆ ವಿವೇಕ್‌ ವಿಹಾರ್‌ ಪ್ರದೇಶದ ಐಟಿಐ ಬ್ಲಾಕ್‌ ಬಿ ಬಳಿ ಇರುವ ಬೇಬಿ ಕೇರ್‌ ಸೆಂಟರ್‌ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ 12 ನವಜಾತ ಶಿಶುಗಳನ್ನು ರಕ್ಷಿಸಿದರು. ಈ ಪೈಕಿ 6 ಮಕ್ಕಳು ಸಾವನ್ನಪ್ಪಿದ್ದು, 6 ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಆಸ್ಪತ್ರೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಪಕ್ಕದ ಕಟ್ಟಡಕ್ಕೂ ಬೆಂಕಿ ತಗುಲಿದೆ ಅಗ್ನಿಶಾಮಕ ದಳ ಪ್ರಯಾಸಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ 11-12 ಜನರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಗೂ ತಗುಲುವ ಮುನ್ನ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಸ್ಪತ್ರೆಯ ಹೊರಭಾಗದಲ್ಲಿದ್ದ ಆ್ಯಂಬುಲೆನ್ಸ್ ಗಳಿಗೆ ಆಮ್ಲಜನಕ ತುಂಬಿಸುತ್ತಿದ್ದಾಗ ಸಿಲಿಂಡರ್‌ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೊದಲು ಆಸ್ಪತ್ರೆಗೆ ಬೆಂಕಿ ತಗುಲಿ ಬಳಿಕ ಪಕ್ಕದ ಕಟ್ಟಡಕ್ಕೂ ವಿಸ್ತರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ದೆಹಲಿ ವಿಧಾನಸಭಾ ಸ್ಪೀಕರ್‌ ರಾಮನಿವಾಸ್‌‍ ಗೋಯಲ್‌ ಸೇರಿದಂತೆ ಹಲವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಸದ್ಯಕ್ಕೆ ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಅತುಲ್‌ ಗರ್ಗ್‌ ತಿಳಿಸಿದ್ದಾರೆ.ಒಟ್ಟು ಒಂಬತ್ತು ಅಗ್ನಿಶಾಮಕ ವಾಹನಗಳನ್ನು ಬಳಸಲಾಗಿದೆ ಆಸ್ಪತ್ರೆಯಿಂದ ರಕ್ಷಿಸಲ್ಪಟ್ಟ ನವಜಾತ ಶಿಶುಗಳನ್ನು ಪೂರ್ವ ದೆಹಲಿಯ ಅಡ್ವಾನ್‌್ಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದರು.

ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಆಸ್ಪತ್ರೆ ಆಡಳಿತಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಶಶುಗಖನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

Latest News