ನವದೆಹಲಿ,ಮಾ.22- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಿದ್ದು, ಈ ಕುರಿತು ಸಾಕ್ಷಾಧಾರಗಳು ಇವೆ ಎಂದು ಜಾರಿನಿರ್ದೇಶನಾಲಯ ಮತ್ತೊಂದು ಹೊಸ ಆರೋಪ ಮಾಡಿದೆ.
ಅರವಿಂದ್ ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಅವರ ವಕೀಲರು ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ನಮ್ಮ ವಾದವನ್ನು ಸಹ ಆಲಿಸಬೇಕೆಂದು ಇಡಿ ನ್ಯಾಯಾಲಯಕ್ಕೆ ಕೆವಿಯಟ್ ಸಲ್ಲಿಸಿದೆ.
ಕ್ರೇಜಿವಾಲ್ ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಿರುವುದು ಸಾಬೀತಾಗಿದೆ. ಈ ಕುರಿತು ತಮ್ಮ ಬಳಿ ಸಾಕ್ಷ್ಯಾಧಾರಗಳು ಇವೆ. ನ್ಯಾಯಾಲಯ ಬಯಸಿದರೆ ಯಾವುದೇ ಕ್ಷಣದಲ್ಲಿ ಸಲ್ಲಿಸುತ್ತೇವೆ ಎಂದು ಇಡಿ ಪರ ವಕೀಲರು ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಿನ್ನೆ ಇಡಿ ಅಕಾರಿಗಳು 2 ಗಂಟೆ ವಿಚಾರಣೆಯ ನಂತರ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು.