Thursday, May 2, 2024
Homeರಾಷ್ಟ್ರೀಯಇಡಿ ನೋಟೀಸ್‍ಗೆ ಕ್ಯಾರೆ ಎನ್ನದ ಕೇಜ್ರಿವಾಲ್

ಇಡಿ ನೋಟೀಸ್‍ಗೆ ಕ್ಯಾರೆ ಎನ್ನದ ಕೇಜ್ರಿವಾಲ್

ನವದೆಹಲಿ, ಜ 3 (ಪಿಟಿಐ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಹೊರಡಿಸಿದ ಮೂರನೇ ಸಮನ್ಸ್ ಕ್ಯಾರೆ ಎಂದಿಲ್ಲ. ಇಂದು ಕೂಡ ಇಡಿ ಅಧಿಕಾರಿಗಳ ಮುಂದೆ ಹಾಜರಾಗಲು ನಿರಾಕರಿಸಿರುವ ಕೇಜ್ರಿವಾಲ್ ಅವರು ನನಗೆ ನೀಡಿರುವ ನೋಟಿಸ್ ಕಾನೂನುಬಾಹಿರ ಎಂದು ಲಿಖಿತ ಉತ್ತರವನ್ನು ಕಳುಹಿಸಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.

ಕೇಜ್ರಿವಾಲ್ ಅವರು ಏಜೆನ್ಸಿಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಪ್ರತಿಪಾದಿಸಿದೆ ಆದರೆ ಅವರನ್ನು ಬಂಧಿಸುವ ಉದ್ದೇಶದಿಂದ ಸಮನ್ಸ್ ಕಳುಹಿಸಲಾಗಿದೆ ಎಂದು ಹೇಳಿಕೊಂಡಿದೆ.
ಚುನಾವಣೆಗೆ ಮುಂಚೆಯೇ ನೋಟಿಸ್ ಏಕೆ ಕಳುಹಿಸಲಾಗಿದೆ? ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಿಂದ ತಡೆಯುವ ಪ್ರಯತ್ನವಾಗಿದೆ ಎಂದು ಪಕ್ಷ ಆರೋಪಿಸಿದೆ.

ಜಪಾನ್ ಭೂಕಂಪಕ್ಕೆ 62 ಬಲಿ, ಮುಂದುವರೆದ ರಕ್ಷಣಾ ಕಾರ್ಯಚರಣೆ

ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಇಂದು ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿತ್ತು. ನವೆಂಬರ್ 2 ಮತ್ತು ಡಿಸೆಂಬರ್ 21 ರ ಹಿಂದಿನ ಎರಡು ಸಮನ್ಸ್‍ಗಳಲ್ಲಿ ಫೆಡರಲ್ ಏಜೆನ್ಸಿಯ ಮುಂದೆ ಹಾಜರಾಗಲು ನಿರಾಕರಿಸಿದ ನಂತರ ಎಎಪಿಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‍ಗೆ ಇದು ಮೂರನೇ ಇಡಿ ನೋಟಿಸ್ ಆಗಿದೆ.

RELATED ARTICLES

Latest News