Tuesday, July 16, 2024
Homeರಾಜ್ಯಮುಖಕ್ಕೆ ಇಪ್ಪತ್ತೊಂದು ಬಾರಿ ಇರಿದು ಜಿಮ್‌ ಮಾಲೀಕನ ಭೀಕರ ಹತ್ಯೆ

ಮುಖಕ್ಕೆ ಇಪ್ಪತ್ತೊಂದು ಬಾರಿ ಇರಿದು ಜಿಮ್‌ ಮಾಲೀಕನ ಭೀಕರ ಹತ್ಯೆ

ನವದೆಹಲಿ,ಜು.11- ಈಶಾನ್ಯ ದಿಲ್ಲಿಯ ಭಜನ್‌ಪುರ ಪ್ರದೇಶದಲ್ಲಿ 28ರ ಹರೆಯದ ಜಿಮ್‌ ಮಾಲೀಕನ ಮುಖಕ್ಕೆ ಇಪ್ಪತ್ತೊಂದು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳ ಕ್ರೌರ್ಯಕ್ಕೆ ಬಲಿಯಾದ ಜಿಮ್‌ ಮಾಲೀಕನನ್ನು ಸುಮಿತ್‌ ಚೌಧರಿ ಅಲಿಯಾಸ್‌‍ ಪ್ರೇಮ್‌ ಎಂದು ಗುರುತಿಸಲಾಗಿದೆ.

ಈತ ಜಿಮ್‌ ಜೊತೆಗೆ ಪ್ರವಾಸ ಮತ್ತು ಪ್ರಯಾಣ ವ್ಯವಹಾರವನ್ನು ನಡೆಸುತ್ತಿದ್ದರು ಮತ್ತು ತಡರಾತ್ರಿ ಗಮ್ರಿ ಎಕ್‌್ಸಟೆನ್ಶನ್‌ನಲ್ಲಿರುವ ಅವರ ಮನೆಯ ಹೊರಗೆ ದಾಳಿ ಮಾಡಿದ ಗುಂಪೊಂದು ಅವರನ್ನು ಕೊಲೆ ಮಾಡಿ ಪರಾರಿಯಾಗಿದೆ.

ಚೌಧರಿ ಅವರು ತಮ ಮನೆಯ ಹೊರಗೆ ಕುಳಿತಿದ್ದಾಗ ಬಂದ ಮೂರ್ನಾಲ್ಕು ವ್ಯಕ್ತಿಗಳು ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ಹಲವು ಬಾರಿ ಇರಿದಿದ್ದಾರೆ. ಅವರ ಮುಖದ ಮೇಲೆ 21ಕ್ಕೂ ಹೆಚ್ಚು ಇರಿತದ ಗಾಯಗಳಾಗಿವೆ ಎಂದು ಡಿಸಿಪಿ ಜಾಯ್‌ ಟಿರ್ಕಿ ತಿಳಿಸಿದ್ದಾರೆ.

ಚೌಧರಿ ಅವರನ್ನು ಜೆಪಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮತಪಟ್ಟಿದ್ದಾರೆ ಎಂದು ಘೋಷಿಸಿದರು. ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

RELATED ARTICLES

Latest News