ನವದೆಹಲಿ, ಮಾ.16 (ಪಿಟಿಐ) ಪ್ರಸಕ್ತ ಸಾಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಗೆ ರಚಿತವಾಗಿರುವ ಚುನಾವಣಾ ಸಮಿತಿಯ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶ ವಿ ರಾಮಸುಬ್ರಮಣಿಯನ್ ಅವರನ್ನು ದೆಹಲಿ ಹೈಕೋರ್ಟ್ ವೀಕ್ಷಕರನ್ನಾಗಿ ನೇಮಿಸಿದೆ.
ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಲಿಂಗ್ಡೋ ಸಮಿತಿಯ ಶಿಫರಸುಗಳ ಪ್ರಕಾರ ಸ್ಥಾಪಿಸಲಾದ ಕುಂದುಕೊರತೆ ನಿವಾರಣಾ ಕೋಶವನ್ನು ಅಂತಿಮ ಫಲಿತಾಂಶದ ಘೋಷಣೆಯ ಮೊದಲು ಚುನಾವಣಾ ಸಮಿತಿಯ ಸಂವಿಧಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಲು ಮತ್ತು ಆದೇಶವನ್ನು ನೀಡುವಂತೆ ಕೇಳಿಕೊಂಡರು.
ಇಸಿ (ಚುನಾವಣಾ ಸಮಿತಿ) ಯ ಸಂವಿಧಾನವು ಕಾನೂನು ಅಥವಾ ಲಿಂಗ್ಡೋ ಸಮಿತಿಯ ಶಿಫರಸುಗಳಿಗೆ (ಸುಪ್ರೀಂ ಕೋರ್ಟ್‍ನಿಂದ ಅನುಮೋದಿಸಲ್ಪಟ್ಟಂತೆ) ಸಮ್ಮತವಾಗಿಲ್ಲ ಎಂದು ಕಂಡುಬಂದರೆ, ವಿವಾದಿತ ಚುನಾವಣೆಗಳಿಗೆ ಸಂಬಂಧಿಸಿದಂತೆ ಸೂಕ್ತ ಪರಿಣಾಮದ ಆದೇಶಗಳು, ಕುಂದುಕೊರತೆ ನಿವಾರಣಾ ಕೋಶದ ಮೂಲಕವೂ ಅಂಗೀಕರಿಸಲಾಗುವುದು ಎಂದು ನ್ಯಾಯಮೂರ್ತಿ ದತ್ತಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯ ಉದ್ದೇಶಕ್ಕಾಗಿ, ಈ ನ್ಯಾಯಾಲಯವು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರನ್ನು ಈ ನ್ಯಾಯಾಲಯವು ಚಟುವಟಿಕೆಗಳು ಹಾಗೂ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮಾಡಲು ವೀಕ್ಷಕರನ್ನಾಗಿ ನೇಮಿಸುತ್ತದೆ ಎಂದು ಪಕ್ಷಗಳ ಆಯಾ ವಕೀಲರು ಸಹ ಒಪ್ಪಿದ್ದಾರೆ.
ಈ ಉದ್ದೇಶಕ್ಕಾಗಿ, ಭಾರತದ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾ„ೀಶರಾದ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ, ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್ 22 ರಂದು ಜೆಎನ್‍ಯುಎಸ್‍ಯು ಚುನಾವಣೆ ನಡೆಯಲಿದ್ದು, ಮಾರ್ಚ್ 24 ರಂದುಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ತಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ನಿಲುವುಗಳೊಂದಿಗೆ ಹೊಂದಾಣಿಕೆ ಮಾಡುವ ಅಭ್ಯರ್ಥಿಗಳ ಬಗ್ಗೆ ಸ್ಪಷ್ಟವಾದ ಪಕ್ಷಪಾತದೊಂದಿಗೆ ಸಮಿತಿಯನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ವಾದಿಸಲಾಗಿತ್ತು.