Wednesday, May 1, 2024
Homeರಾಜ್ಯಇಂದಿನಿಂದ ವೈರಮುಡಿ ಜಾತ್ರೋತ್ಸವ ಪ್ರಾರಂಭ

ಇಂದಿನಿಂದ ವೈರಮುಡಿ ಜಾತ್ರೋತ್ಸವ ಪ್ರಾರಂಭ

ಮೇಲುಕೋಟೆ,ಮಾ.16- ಐತಿಹಾಸಿಕ ಬಹ್ಮೋತ್ಸವಗಳಲ್ಲಿ ಪ್ರಮುಖವಾದ ಶ್ರೀ ಚೆಲುವನಾರಾಯಣ ಸ್ವಾಮಿಯವರ ವೈರಮುಡಿ ಕಿರೀಟಧಾರಣ ಮಹೋತ್ಸವ ಇದೇ 21ರಿಂದ ರಾತ್ರಿ 8ಗಂಟೆಗೆ ಆರಂಭವಾಗಲಿದೆ.
ಹತ್ತು ದಿನಗಳ ಬ್ರಹ್ಮೋತ್ಸವದಲ್ಲಿ ನಾಲ್ಕನೆ ತಿರುನಾಳ್ ದಿನವಾದ ಮಾ.21ರ ರಾತ್ರಿ ಶ್ರೀದೇವಿ, ಭೂದೇವಿ ಸಮೇತರಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ರಾತ್ರಿ 8 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಆರಂಭವಾಗಲಿದೆ.

ತಡರಾತ್ರಿ ವೈರಮುಡಿ ಉತ್ಸವ ಮುಗಿದ ತಕ್ಷಣ ಸ್ವಾಮಿಗೆ ವಜ್ರ ಖಚಿತ ರಾಜಮುಡಿ ಉತ್ಸವ ನೆರವೇರಲಿದೆ. ಭಾರತದಲ್ಲಿ ಒಂದೇ ರಾತ್ರಿ ಎರಡು ವಜ್ರಖಚಿತ ಕಿರೀಟ ತೊಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದ್ದು ರಾಜ್ಯ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಬ್ರಹ್ಮೋತ್ಸವದ ಪ್ರಮುಖ ಉತ್ಸವಗಳು:
ವೈರಮುಡಿ ಜಾತ್ರಾಮಹೋತ್ಸವ ಇಂದು ಅಂಕುರಾರ್ಪಣದೊಂದಿಗೆ ಆರಂಭವಾಗಿ ಮಾ. 28 ರ ಶೇರ್ತಿ ಸೇವೆಯವರೆಗೆ 13 ದಿನಗಳ ಕಾಲ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ಮಾ.24 ರ ಭಾನುವಾರ ನಡೆಯುವ ಮಹಾರಥೋತ್ಸವ 25 ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ 26 ರಂದು ಬೆಳಿಗ್ಗೆ 11 ಗಂಟೆಗೆ ತೀರ್ಥಸ್ನಾನ ಸಂಜೆ 5 ಗಂಟೆಗೆ ನಡೆಯುವ ಪಟ್ಟಾಭಿಷೇಕ ಮಹೋತ್ಸವಗಳು ಅತ್ಯಂತ ಪ್ರಮುಖ ಉತ್ಸವಗಳಾಗಿವೆ.

ನಾಳೆ ಸಂಜೆ 5 ಗಂಟೆಗೆ ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ ಮಾ.18 ರಂದು ಬೆಳಿಗ್ಗೆ 9 ಗಂಟೆಗೆ ದ್ವಜಾರೋಹಣ, 19 ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ 20 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲೀ ಮಹೋತ್ಸವ 22 ರ ಪ್ರಹ್ಮಾದ ಪರಿಪಾಲನೋತ್ಸವ 23 ರಂದು ರಾತ್ರಿ ಗಜೇಂದ್ರಮೋಕ್ಷ ಉತ್ಸವ 27 ರಂದು ನಡೆಯುವ ಮಹಾಭಿಷೇಕ ಮಹೋತ್ಸವಗಳು ವಿಶೇಷ ಉತ್ಸವಗಳಾಗಿದೆ.

ಸ್ವಾಮಿಗೆ ವಾಹನೋತ್ಸವ ವೈಭವ :
ವಿಶೇಷ ಉತ್ಸವಗಳ ಜೊತೆಗೆ ವಾಹನೋತ್ಸವಗಳು ಸಹ ಚೆಲುವನಾರಾಯಣನಿಗೆ ನೆರವೇರುತ್ತದೆ. ವಾಹನೋತ್ಸವಗಳು ಪ್ರತಿದಿನ ರಾತ್ರಿ ನಡೆಯಲಿದ್ದು, ಮಾ.18ರಂದು ಹಂಸ ವಾಹನ 19ರಂದು ಶೇಷವಾಹನ, 20ರಂದು ಚಂದ್ರಮಂಡಲ ವಾಹನ, 22ರಂದು ಗರುಡ ವಾಹನ, 23ರಂದು ಗಜ ಮತ್ತು ಅಶ್ವವಾಹನ, 24 ರಂದು ರಾತ್ರಿ ಬಂಗಾರದ ಪಲ್ಲಕ್ಕಿ, 25ರಂದು ಅಶ್ವವಾಹನೋತ್ಸವ, 26 ಪುಷ್ಪಮಂಟಪ ವಾಹನ, 27 ಹಮುಮಂತ ವಾಹನೋತ್ಸವಗಳು ನಡೆಯಲಿದೆ.

ವಿಶೇಷ ವ್ಯವಸ್ಥೆ:
ಇಡೀ ಮೇಲುಕೋಟೆಗೆ ಆಕರ್ಷಕ ದೀಪಾಲಂಕಾರ, ಸ್ವಾಮಿಯ ಉತ್ಸವಕ್ಕೆ ವಿಶೇಷ ತೋಮಾಲೆಗಳ ಅಲಂಕಾರ, ಮೈಸೂರು, ಬೆಂಗಳೂರು, ಮಂಡ್ಯ ಹಾಸನ ಚನ್ನರಾಯಪಟ್ಟಣ ನಾಗಮಂಗಲ ಮುಂತಾದ ಸ್ಥಳಗಳಿಂದ ವಿಶೇಷಬಸ್ ಸೌಕರ್ಯ, ಸುಜ್ಜಿತ ವೈಧ್ಯಕೀಯ ಸೇವೆ, ನಿರಂತರ ಸ್ವಚ್ಚತೆ ಶುದ್ಧಕುಡಿಯುವ ನೀರಿನ ಪೂರೈಕೆ, ವೈರಮುಡಿ, ರಥೋತ್ಸವ ನಾಗವಲ್ಲೀ ಉತ್ಸವಗಳಂದು ದೇವಾಲಯದ ಆವರಣಗಳಿಗೆ ಪುಷ್ಪಾಲಂಕಾರ, ಪ್ರತಿ ಉತ್ಸವ ಹಾಗೂ ವಾಹನೋತ್ಸವಗಳಿಗೆ ಕನ್ನಡ ಸಂಸ್ಕøತಿ ಇಲಾಖೆ ಪ್ರಾಯೋಜನೆ ಹಾಗೂ ಎಸ್.ಎಸ್ ಐ. ಸಾಂಸ್ಕøತಿಕ ವೇದಿಕೆ ಸಹಯೋಗದಲ್ಲಿ ನಾದೋಪಾಸನ ಸೇವೆ ಮಂಗಳವಾದ್ಯ ನಿಯೋಜನೆ ಇರಲಿದೆ.

RELATED ARTICLES

Latest News