ನವದೆಹಲಿ, ಜ 31 (ಪಿಟಿಐ) : ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು ವಿಮಾನ ಮತ್ತು ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ನಗರದಲ್ಲಿ ಹಗಲಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಇಂದಿರಾಗಾಂ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 6.30ಕ್ಕೆ ದಟ್ಟವಾದ ಮಂಜು ಆವರಿಸಿದ್ದರಿಂದ ಗೋಚರತೆ ಶೂನ್ಯವಾಗಿತ್ತು. ಬೆಳಿಗ್ಗೆ 9 ಗಂಟೆಯವರೆಗೂ ಗೋಚರತೆ ಹಾಗೆಯೇ ಇತ್ತು ಎಂದು ವರದಿಯಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕೆಟ್ಟ ಹವಾಮಾನದಿಂದಾಗಿ ಕನಿಷ್ಠ ಮೂರು ವಿಮಾನಗಳ ಮಾರ್ಗ ಬದಲಿಸುವಂತಾಗಿತ್ತು. ಅತ್ಯಂತ ದಟ್ಟವಾದ ಮಂಜಿನಿಂದಾಗಿ ಹಲವಾರು ರೈಲುಗಳು ತಡವಾಗಿ ಓಡುತ್ತಿವೆ ಎಂದು ವರದಿಯಾಗಿದೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-01-2024)
ಇಂದು ಸಂಜೆ ಅಥವಾ ರಾತ್ರಿಯಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿಯೊಂದಿಗೆ ಲಘು ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮದ ಅಡಚಣೆಯಿಂದಾಗಿ ಹವಾಮಾನ ಏರಿಳಿತಗಳು ಫೆ 3 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ, ಅಲ್ಲಿಂದ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಇಂದಿನ ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಋತುವಿನ ಸರಾಸರಿಗಿಂತ ಕಡಿಮೆಯಾಗಿದೆ.ಮಂಗಳವಾರದವರೆಗಿನ ಅಕೃತ ಅಂಕಿಅಂಶಗಳ ಪ್ರಕಾರ ಜನವರಿ 30 ರವರೆಗೆ ದೆಹಲಿಯಲ್ಲಿ ಸರಾಸರಿ ಗರಿಷ್ಠ ತಾಪಮಾನವು 17.7 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು 13 ವರ್ಷಗಳಲ್ಲೇ ಕನಿಷ್ಠವಾಗಿದೆ.
ಇದೇ ಅವಧಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸರಾಸರಿ ಕನಿಷ್ಠ ತಾಪಮಾನವು 6.2 ಡಿಗ್ರಿ ಸೆಲ್ಸಿಯಸ್‍ಗೆ ದಾಖಲಾಗಿದೆ, ಇದು 13 ವರ್ಷಗಳಲ್ಲಿ ಎರಡನೇ ಅತಿ ಕಡಿಮೆಯಾಗಿದೆ ಎಂದು ಡೇಟಾ ತೋರಿಸಿದೆ.