Tuesday, May 21, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-01-2024)

ನಿತ್ಯ ನೀತಿ : ಅದ್ಭುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು. ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಕಷ್ಟಗಳು ಪಾಠ ಕಲಿಸಿದರೆ ನಂಬಿಕೆಗಳು ಶಕ್ತಿ ತುಂಬುತ್ತವೆ.

ಪಂಚಾಂಗ ಬುಧವಾರ 31-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಹಸ್ತ / ಯೋಗ: ಸುಕರ್ಮ / ಕರಣ: ಗರಜೆ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.20
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಮನೆಯ ಎಲ್ಲ ಸದಸ್ಯರೊಂದಿಗೆ ಸಂಯಮದಿಂದ ಕಾಲ ಕಳೆಯಲು ಪ್ರಯತ್ನಿಸುವಿರಿ.
ವೃಷಭ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಿಗಲಿದೆ.
ಮಿಥುನ: ಕಠಿಣ ಪರಿಶ್ರಮ ದಿಂದ ಮಾತ್ರ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

ಕಟಕ:ತಾಯಿಗೆ ಆರೋಗ್ಯ ಸಮಸ್ಯೆಯಿಂದಾಗಿ ಸ್ವಲ್ಪ ತೊಂದರೆ ಅನುಭವಿಸಬೇಕಾಗುತ್ತದೆ.
ಸಿಂಹ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ.

ತುಲಾ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಒಳ್ಳೆಯದು.
ವೃಶ್ಚಿಕ: ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ಬರವ ನಿರೀಕ್ಷೆಯಿದೆ.
ಧನುಸ್ಸು:ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸಿ.

ಮಕರ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ. ಎಲ್ಲೋ ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ.
ಕುಂಭ: ನೀವು ಮಾಡುವ ಕೆಲಸಗಳಿಂದ ಸಮಾಜ ದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ.
ಮೀನ: ನಿಮ್ಮ ಶಕ್ತಿ-ಸಾಮಥ್ರ್ಯವನ್ನು ನೋಡಿ ಶತ್ರುಗಳು ದೂರ ಉಳಿಯುತ್ತಾರೆ.

RELATED ARTICLES

Latest News