Monday, May 6, 2024
Homeಬೆಂಗಳೂರು3 ಕೋಟಿ ರೂ. ಮೌಲ್ಯದ ಇ-ಸಿಗರೇಟ್ ವಶ

3 ಕೋಟಿ ರೂ. ಮೌಲ್ಯದ ಇ-ಸಿಗರೇಟ್ ವಶ

ಬೆಂಗಳೂರು, ಜ.30- ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್‍ಗಳನ್ನು ದುಬೈನಿಂದ ಕಳ್ಳಸಾಗಣೆ ಮಾಡಿ, ಮನೆಯಲ್ಲಿ ಸಂಗ್ರಹಿ ಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 3 ಕೋಟಿ ಮೌಲ್ಯದ ಇ-ಸಿಗರೇಟ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ನಗರದ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಗುರಪ್ಪನಪಾಳ್ಯ, 1ನೇ ಹಂತ, ಬಿ.ಟಿ.ಎಂ ಲೇಔಟ್‍ನ ಮನೆಯೊಂದರಲ್ಲಿ ಕೇಂದ್ರ ಸರ್ಕಾರದಿಂದ ನಿಷೇಧಿಸಲಾಗಿರುವ ಎಲೆಕ್ಟ್ರಾನಿಕ್ ಸಿಗರೇಟ್‍ಗಳನ್ನು (ಇ-ಸಿಗರೇಟ್) ಕೇರಳ ಮೂಲದ ವ್ಯಕ್ತಿಯೊಬ್ಬ ವಿದೇಶದಿಂದ ಅಕ್ರಮವಾಗಿ ಆಮದು ಮಾಡಿಕೊಂಡು ತನ್ನ ಮನೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದನು.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಆತನ ಮನೆಯ ಮೇಲೆ ದಾಳಿ ಮಾಡಿ, ಆತನನ್ನು ವಶಕ್ಕೆ ಪಡೆದು ಮನೆಯಲ್ಲಿದ್ದ 3 ಕೋಟಿ ಮೌಲ್ಯದ ಇ-ಸಿಗರೇಟ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರೆ ವ್ಯಕ್ತಿಗಳು ದುಬೈ ದೇಶದಿಂದ ಎಲೆಕ್ಟ್ರಾನಿಕ್ ಸಿಗರೇಟ್‍ಗಳನ್ನು (ಇ-ಸಿಗರೇಟ್) ಕೊರಿಯರ್ ಎಜೆನ್ಸಿಯ ಮೂಲಕ ನಗರಕ್ಕೆ ತರಿಸಿಕೊಂಡು ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿಕೊಂಡಿದ್ದರೆಂಬ ಮಾಹಿತಿಯು ತನಿಖೆಯಿಂದ ತಿಳಿದುಬಂದಿರುತ್ತದೆ.

ನನ್ನ ಬದ್ಧತೆ, ನಿಲುವು ಮಂಡ್ಯದ ವಿಷಯದಲ್ಲಿ ಬದಲಾಗುವುದಿಲ್ಲ : ಸಂಸದೆ ಸುಮಲತಾ

ಆರೋಪಿಗಳ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಸದರಿ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರಾದ (ಅಪರಾಧ) ಡಾ|| ಚಂದ್ರಗುಪ್ತ ಮತ್ತು ಉಪ ಪೊಲೀಸ್ ಆಯುಕ್ತರಾದ (ಅಪರಾಧ-2) ಶ್ರೀನಿವಾಸ್ ಗೌಡರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತರವರ ನೇತೃತ್ವದಲ್ಲಿ, ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿರುತ್ತಾರೆ.

RELATED ARTICLES

Latest News