Monday, February 26, 2024
Homeರಾಷ್ಟ್ರೀಯಇಂಡಿ ಮೈತ್ರಿಕೂಟಕ್ಕೆ ಚಂಢೀಘಡದಲ್ಲಿ ಮರ್ಮಾಘಾತ, ಬಿಜೆಪಿಗೆ ಮೇಯರ್ ಪಟ್ಟ

ಇಂಡಿ ಮೈತ್ರಿಕೂಟಕ್ಕೆ ಚಂಢೀಘಡದಲ್ಲಿ ಮರ್ಮಾಘಾತ, ಬಿಜೆಪಿಗೆ ಮೇಯರ್ ಪಟ್ಟ

ಚಂಡೀಘಡ,ಜ.30- ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರತಿಷ್ಠಿತ ಚಂಡೀಘಡ ಮೇಯರ್ ಪಟ್ಟ ಬಿಜೆಪಿಗೆ ಒಲಿದಿದೆ. ಬಿಜೆಪಿ ಅಭ್ಯರ್ಥಿ ಮನೋಜ್‍ಕುಮಾರ್ ಸೋಂಕರ್ ಅವರು 16 ಮತ ಪಡೆದು ತಮ್ಮ ಪ್ರತಿಸ್ರ್ಪಧಿ ಇಂಡಿಯಾ ಮೈತ್ರಿಕೂಟದ ಕುಲದೀಪ್ ಸಿಂಗ್ ಅವರನ್ನು ನಾಲ್ಕು ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕಾಂತರಾಜ್ ವರದಿ ಸ್ವೀಕರಿಸಲಿ : ಹೆಚ್‌ಡಿಕೆ ಸವಾಲ್

ದೇಶದ ಪ್ರತಿಷ್ಠಿತ ಮೇಯರ್ ಹುದ್ದೆ ಎಂದೇ ಪರಿಗಣಿಸಲ್ಪಟ್ಟಿದ್ದ ಚಂಡೀಘಡ ಪಾಲಿಕೆಯು ಬಿಜೆಪಿ ತೆಕ್ಕೆಗೆ ಬಂದಿರುವುದರಿಂದ ಇಲ್ಲಿ ಕೂಡ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ. ಪದನಿಮ್ಮತ್ತ ಸದಸ್ಯ ಕಿರಣ್.ಕೆ ಅವರ ಮತ ಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ ಅಭ್ಯರ್ಥಿ ಮನೋಜ್‍ಕುಮಾರ್ ಸೋಂಕರ್ 16 ಮತ ಪಡೆದರೆ, ಇಂಡಿಯಾ ಒಕ್ಕೂಟದ ಅಭ್ಯರ್ಥಿ ಕುಲದೀಪ್ ಸಿಂಗ್ 12 ಮತಗಳನ್ನು ಪಡೆದರೆ 8 ಮತಗಳು ಅಸಿಂಧುವಾಗಿದೆ.

ಎಎಪಿ-ಕಾಂಗ್ರೆಸ್‍ನ 8 ಮತಗಳು ಅಸಿಂಧು ಎಂದು ಘೋಷಿಸುತ್ತಿದ್ದಂತೆ ಸಭೆಯೊಳಗೆ ಗದ್ದಲ ಉಂಟಾಗಿ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಚುನಾವಣಾಧಿಕಾರಿ ಬಿಜೆಪಿ ಅಭ್ಯರ್ಥಿಯು ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದರು.

RELATED ARTICLES

Latest News