Wednesday, February 28, 2024
Homeರಾಜ್ಯರಾಜ್ಯಸಭಾ ಚುನಾವಣೆ : ರಾಜ್ಯದಿಂದ ಸೋನಿಯಾ ಆಯ್ಕೆ ಸಾಧ್ಯತೆ

ರಾಜ್ಯಸಭಾ ಚುನಾವಣೆ : ರಾಜ್ಯದಿಂದ ಸೋನಿಯಾ ಆಯ್ಕೆ ಸಾಧ್ಯತೆ

ಬೆಂಗಳೂರು,ಜ.30- ರಾಜ್ಯದಲ್ಲಿ ತೆರವಾಗುತ್ತಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಕಾಂಗ್ರೆಸ್‍ನಲ್ಲಿ ಪೈಪೋಟಿ ತೀವ್ರಗೊಂಡಿದ್ದು, ಎಐಸಿಸಿಯ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಸೋನಿಯಾಗಾಂಧಿಯವರು ವಯೋ ಸಹಜತೆಯಿಂದಾಗಿ ಈ ಬಾರಿ ಉತ್ತರಪ್ರದೇಶದ ರಾಯ್‍ಭರೇಲಿಯಲ್ಲಿ ಸ್ಪರ್ಧೆ ಮಾಡುವುದರಿಂದ ಹಿಂದೇಟು ಹಾಕುತ್ತಿದ್ದು, ಅವರ ಪುತ್ರಿ ಪ್ರಿಯಾಂಕ ಗಾಂಧಿಯವರಿಗೆ ಕ್ಷೇತ್ರ ಬಿಟ್ಟುಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಸೋನಿಯಾಗಾಂಧಿಯವರನ್ನು ರಾಜ್ಯಸಭೆ ಮೂಲಕ ಸಂಸತ್‍ಗೆ ಆಯ್ಕೆ ಮಾಡಲು ಕಾಂಗ್ರೆಸ್‍ನಲ್ಲಿ ಚಿಂತನೆ ನಡೆದಿದೆ. ಏಪ್ರಿಲ್ 2 ರ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್‍ನ ಎಲ್.ಹನುಮಂತಯ್ಯ,ಜಿ.ಸಿ.ಚಂದಶೇಖರ್, ಸಯ್ಯದ್ ನಾಸಿರ್ ಹುಸೇನ್, ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರ ಸ್ಥಾನಗಳು ತೆರವಾಗಲಿದೆ. ಕಾಂಗ್ರೆಸ್ ಸಂಖ್ಯಾಬಲದ ಆಧಾರದ ಮೇಲೆ ಮೂರು ಕ್ಷೇತ್ರಗಳನ್ನು ಗೆಲ್ಲುವ ಅವಕಾಶವಿದೆ.

ಹೀಗಾಗಿ ರಾಜ್ಯಸಭಾ ಸ್ಥಾನಗಳಿಗೆ ತೀವ್ರ ಲಾಭಿಗಳು ನಡೆಯುತ್ತಿವೆ. ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ಸಯ್ಯದ್ ನಾಸಿರ್ ಹುಸೇನ್ ಮೂರು ಮಂದಿ ಮರು ಆಯ್ಕೆ ಬಯಸಿದ್ದಾರೆ. ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಗೌಡ ಸೇರಿದಂತೆ ಅನೇಕ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಬಲವಂತವಾಗಿ ಹನುಮ ಧ್ವಜ ಇಳಿಸಿದ್ದೇ ಕೆರಗೋಡು ಗ್ರಾಮಸ್ಥರ ಆಕ್ರೋಶದ ಜ್ವಾಲೆಗೆ ಕಾರಣ

ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲು ಸಾಧ್ಯವಾಗದೇ ಇರುವ ಪ್ರಮುಖ ನಾಯಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ರಾಜ್ಯದ ಇಬ್ಬರು ನಾಯಕರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ. ಅದರಲ್ಲಿ ಒಂದು ಎಐಸಿಸಿಯ ಕಾರ್ಯಕಾರಿ ಸಮಿತಿಯಲ್ಲಿರುವ ನಾಸಿರ್ ಹುಸೇನ್‍ರನ್ನು ಮರು ಆಯ್ಕೆ ಮಾಡುವ ನಿರೀಕ್ಷೆಗಳಿವೆ. ಉಳಿದ ಒಂದು ಸ್ಥಾನಕ್ಕೆ ತೀವ್ರ ಲಾಭಿ ನಡೆಯುತ್ತಿದೆ. ಮತ್ತೊಂದು ಸ್ಥಾನಕ್ಕೆ ಸೋನಿಯಾಗಾಂಧಿಯವರನ್ನೇ ಆಯ್ಕೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News